ಉಗ್ರ ಸಂಘಟನೆಯಾಗಿ ಕೆಲ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ LTTE ಮುಖ್ಯಸ್ಥ ಪ್ರಭಾಕರನ್ ಕುರಿತ ಮಹತ್ವದ ಸತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. LTTE ಮುಖ್ಯಸ್ಥ ಪ್ರಭಾಕರನ್ ಸಾವಿನ ಕುರಿತು ತಮಿಳರ ರಾಷ್ಟ್ರೀಯವಾದಿ ಚಳುವಳಿಯ ನಾಯಕ ಪಜಾ ನೆಡುಮಾರನ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಎಲ್ಟಿಟಿಇ ನ ಮುಖ್ಯಸ್ಥ ಪ್ರಭಾಕರ್ ಇನ್ನೂ ಜೀವಂತವಾಗಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
LTTE ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿರುವ ಅವರು ತಮಿಳು ಜನಾಂಗದ ವಿಮೋಚನೆ ಸಂಬಂಧ ಯೋಜನೆ ಒಂದನ್ನು ಘೋಷಣೆ ಮಾಡಲಿದ್ದಾರೆ. ಪ್ರಪಂಚದ ಎಲ್ಲಾ ತಮಿಳು ಜನರು ಒಟ್ಟಾಗಿ ಅವರನ್ನು ಬೆಂಬಲಿಸಬೇಕು ಎಂದು ಪಜಾ ನಡುಮಾರನ್ ಮನವಿ ಮಾಡಿಕೊಂಡಿದ್ದಾರೆ.
ತಮಿಳರ ರಾಷ್ಟ್ರೀಯ ನಾಯಕ, ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಂಬಂಧಿಸಿದ ಸತ್ಯವನ್ನು ತಮಿಳು ಜನರಿಗೆ ಹಾಗೂ ಜಗತ್ತಿಗೆ ತಿಳಿಸಲು ಸಂತೋಷವೆನಿಸುತ್ತದೆ. ಪ್ರಭಾಕರನ್ ಚೆನ್ನಾಗಿದ್ದಾರೆ ಎಂದು ನಡುಮಾರನ್ ತಿಳಿಸಿದ್ದಾರೆ. ಇದೊಂದು ಘೋಷಣೆ ಇದುವರೆಗೆ ಇದ್ದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಊಹಾ ಪೋಹಗಳಿಗೆ ಅಂತ್ಯ ಹಾಡಿದೆ.

ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ 2009 ರಲ್ಲಿ ಹತ್ಯೆಗೈಯ್ಯಲಾಗಿತ್ತು.
ತಮಿಳುನಾಡು-ಶ್ರೀಲಂಕಾದಲ್ಲಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇದ್ದ ಎಲ್ಟಿಟಿಇ ಬಗ್ಗೆ ತಿಳಿದಿರುವ ಸತ್ಯ. ಈ ಸಂಘಟನೆಯನ್ನು ವರ್ಷಗಳ ಹಿಂದೆಯೇ ವಿಸರ್ಜಿಸಲಾಗಿದ್ದು, ಆ ಸಂಘಟನೆಯ ನಾಯಕರಾದ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು.
