ನಿನ್ನೆ ಬಜೆಟ್ ಹಿನ್ನೆಲೆಯಲ್ಲಿ ಕೈ ಮುಖಂಡರು ಕಿವಿಗೆ ಹೂ ಮುಡಿದುಕೊಂಡು ಬಂದಿದ್ದರು. ಈ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದಷ್ಟೇ ಅಲ್ಲದೇ ಸಾಕಷ್ಟು ಪ್ರಚಾರವನ್ನೂ ಪಡೆದಿದೆ.
ಹೀಗಾಗಿ ಈ ಐಡಿಯಾವನ್ನು ಕಾಂಗ್ರೆಸ್ ನಾಯಕರಿಗೆ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಕಾಂಗ್ರೆಸ್ ನಾಯಕರು, ಏಕಾಏಕಿ ಹೂ ಮುಡಿದುಕೊಂಡು ಬಂದಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಈ ಐಡಿಯಾ ಹಿಂದೆ ಸುನಿಲ್ ಕನಗೊಳು ತಂಡ ಕೆಲಸ ಮಾಡಿದೆ ಎನ್ನುವುದು ತಿಳಿದುಬಂದಿದೆ.
ಸುನಿಲ್ ಕನಗೊಳು ಹಿಂದೆಯೇ ಹೂ ಮುಡಿದು ಸಂದೇಶ ರವಾನೆ ಮಾಡಿದರೆ ಸಾರ್ವಜನಿಕವಾಗಿ ಚರ್ಚೆಯಾಗಲಿದೆ ಎಂದಿದ್ದರು. ಇವರನ್ನು ಕಾಂಗ್ರೆಸ್ ಪರವಾಗಿ ರಣತಂತ್ರ ರೂಪಿಸಲು ಎಐಸಿಸಿಯಿಂದ ನೇಮಕ ಮಾಡಲಾಗಿದೆ.
