ಹಾಸನ ರೇವ್ ಪಾರ್ಟಿ ಪ್ರಕರಣದ ರೂವಾರಿ,ಪಾಂಡೇಶ್ವರ ಠಾಣಾ ಹೆಡ್ ಕಾನ್ಸ್ ಸ್ಟೇಬಲ್ ಶ್ರೀಲತಾ ಸಸ್ಪೆಂಡ್.!

ಕರಾವಳಿ

ಕರ್ತವ್ಯ ಲೋಪಕ್ಕೆ ಸೂಕ್ತ ಕ್ರಮಕೈಗೊಂಡ ಮಂಗಳೂರು ಕಮೀಷನರ್

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಯಾವುದೇ ಅಧಿಕಾರಿ, ಸಿಬ್ಬಂದಿಯ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಅಧಿಕಾರ ವಹಿಸಿಕೊಂಡ ಮೊದಲ ದಿನ ಘೋಷಿಸಿದ್ದ ಕಮಿಷನರ್ ಕುಲದೀಪ್ ಆರ್ ಜೈನ್ ಇದೀಗ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ನಗರ ದಕ್ಷಿಣ ಪೊಲೀಸ್ ಠಾಣೆ (ಪಾಂಡೇಶ್ವರ) ದಲ್ಲಿ ಹೆಡ್ ಕಾನ್ ಸ್ಟ್ರೇಬಲ್ ಆಗಿ ಕರ್ತವ್ಯದಲ್ಲಿದ್ದ ಶ್ರೀಲತಾ ಅಮಾನತುಗೊಂಡವರು.

ಗಂಡ ಹೆಂಡತಿ ಗಲಾಟೆ ವಿಚಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತುರ್ತು ವಾಹನದಲ್ಲಿದ್ದ ಹೆಡ್ ಕಾನ್ ಸ್ಟ್ರೇಬಲ್ ಶ್ರೀಲತಾ ಖಾಸಗಿ ವಾಹನವೊಂದರಲ್ಲಿ ತೆರಳಿ ಸಂಬಂಧಪಟ್ಟ ಪಾರ್ಟಿಯ ಜತೆ ಸಂಧಾನ ನೆಪದಲ್ಲಿ ವ್ಯವಹಾರ ಕುದುರಿಸಿದ್ದರು. ಇದನ್ನು ಪ್ರತಿ ದೂರುದಾರರು ಗಮನಿಸಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದರು. ಇದನ್ನು ಪೊಲೀಸ್ ಹೆಡ್ ಕಾನ್ ಸ್ಟ್ರೇಬಲ್ ಗಮನಿಸಿದ್ದು ಇದೇ ವಿಷಯಕ್ಕೆ ದೂರುದಾರರ ಮಧ್ಯೆ ವಾದ ವಿವಾದ ನಡೆದಿತ್ತು.

ರೇವ್ ಪಾರ್ಟಿ ಪ್ರಕರಣದ ಆರೋಪಿಯಾಗಿದ್ದ ಶ್ರೀಲತಾ.ಹಾಸನ ಜಿಲ್ಲೆಯ ಆಲೂರು ನಂದಿಪುರ ಎಸ್ಟೇಟ್ ರೆಸಾರ್ಟ್ ನಲ್ಲಿ 2021 ಏಪ್ರಿಲ್ 9 ರಂದು ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಹೆಡ್ ಕಾನ್ ಸ್ಟ್ರೇಬಲ್ ಶ್ರೀಲತಾ ಸೇರಿದಂತೆ ಸುಮಾರು 130 ಯುವಕ ಯುವತಿಯರನ್ನು ಬಂಧಿಸಲಾಗಿತ್ತು. ಶ್ರೀಲತಾ ಪುತ್ರ ಅತುಲ್ ಎಂಬಾತ ಈ ಪ್ರಕರಣದಲ್ಲಿ ಪರಾರಿಯಾಗಿದ್ದ. ದಾಳಿ ವೇಳೆ ಮದ್ಯದ ಬಾಟಲಿಗಳು, ಮಾದಕ ವಸ್ತುಗಳು ಪತ್ತೆಯಾಗಿತ್ತು. ಹಾಸನ ಎಸ್ಪಿಯಾಗಿದ್ದ ಶ್ರೀನಿವಾಸ ಗೌಡ ದಾಳಿ ನಡೆಸಿದ್ದರು.