ನನ್ನನ್ನ ಮೋಸ ಮಾಡಿದರು, ನಾನು ಮೋಸ ಹೋದೆ. ಕಣ್ಣೀರಿಟ್ಟ ಕಚ್ಚಾ ಬಾದಾಮ್

ರಾಷ್ಟ್ರೀಯ

ಮತ್ತೆ ಬೀದಿ ಬೀದಿ ಅಲೆದು ಕಡಲೆಕಾಯಿ ಮಾರುವ ಸ್ಥಿತಿ ಬಂದಿದೆ

ಮೋಸಗಾರರ ಕೆಲಸವೇ ಮೋಸ ಮಾಡುವುದು.ಅದು ಅಮಾಯಕರಿಗೆ ಮತ್ತು ಬಡವರಿಗೆ. ಕಚ್ಚಾ…ಬಾದಾಮ್ ಎಂದು ಖ್ಯಾತಿ ಪಡೆದು ತನ್ನದೇಯಾದ ಶೈಲಿಯಲ್ಲಿ ಹಾಡು ಹೇಳಿ ದೇಶದಾದ್ಯಂತ ಹವಾ ಸೃಷ್ಠಿಸಿದ್ದ ಪಶ್ಚಿಮ ಬಂಗಾಳದ ಭಿರ್‌ಭೂಮ್‌ನ ಭುಬನ್ ಭಡ್ಯಾಕರ್ ಇದೇ ರೀತಿ ಮೋಸ ಹೋಗಿರುವುದು ವರದಿಯಾಗಿದೆ.ಎಬಿಪಿ ಸುದ್ದಿಸಂಸ್ಥೆಯ ಸಂದರ್ಶನದಲ್ಲಿ ಮಾತನಾಡಿರುವ ಬುಬನ್ ನಾನು ಮೋಸ ಹೋಗಿದ್ದೇನೆ. ಸದ್ಯ ನಾನು ಸಂಕಷ್ಟದಲ್ಲಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

2021 ರಲ್ಲಿ ಹಾಡು ವೈರಲ್‌ ಆಗುವ ಪೂರ್ವದಲ್ಲಿ ಭಿರ್‌ಭೂಮ್‌ನ ಉದ್ಯಮಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರು ‘ಇಂಡಿಯನ್ ಪರ್‌ಫಾರ್ಮಿಂಗ್ ಸೊಸೈಟಿ’ ಹೆಸರಿನಲ್ಲಿ ನನ್ನ ಕಚ್ಚಾ ಬಾದಾಮ್ ಹಾಡು ಮತ್ತು ಟ್ಯೂನ್‌ ಅನ್ನು ತಮ್ಮದು ಎಂದು ನನ್ನನ್ನು ವಂಚಿಸಿದ್ದಾರೆ. ಏಕೆಂದರೆ ನಾನೀಗ ಆ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೋದರೆ ಕಾಪಿರೈಟ್ ಕ್ಲೈಮ್ ಬರುತ್ತಿದೆ’ ಎಂದು ಅಲವತ್ತುಕೊಂಡಿದ್ದಾರೆ.ಉದ್ಯಮಿ ಎಂದು ಹೇಳಲಾದ ವ್ಯಕ್ತಿ ನನ್ನ ಹಾಡು ಕೇಳಿ 3 ಲಕ್ಷ ರೂಪಾಯಿ ನೀಡಿ ಕಾಗದವೊಂದರ ಮೇಲೆ ಸಹಿ ಮಾಡಿಸಿಕೊಂಡಿದ್ದರು. ನನಗೆ ಸರಿಯಾಗಿ ಓದಲು ಬರದಿದ್ದರಿಂದ ಅದು ನನಗೆ ಗೊತ್ತಾಗಿರಲಿಲ್ಲ. ಹಾಡನ್ನು ವಿಡಿಯೊ ಮಾಡಿಕೊಂಡು ಯುಟ್ಯೂಬ್‌ಗೆ ಹಾಕಿದ್ದರಿಂದ ಅದು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗ ನಾನು ಯೂಟ್ಯೂಬ್‌ನಲ್ಲಿ ಆ ಹಾಡು ಹಾಗೂ ಟ್ಯೂನ್‌ ಅನ್ನು ಹಾಕಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಾನು ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ. ಈಗ ನನ್ನದೇ ಕಚ್ಚಾ ಬಾದಾಮ್ ಹಾಡಿನ ವಿವಿಧ ರೂಪಗಳನ್ನು ಯುಟ್ಯೂಬ್‌ಗೆ ಹಾಕಲು ಆಗುತ್ತಿಲ್ಲ. ನನ್ನ ಜೀವನ ಇದೀಗ ಮೊದಲಿನಂತೆ ಆಗಿದೇ ಎಂದು ದುಃಖ ತೋಡಿಕೊಂಡಿದ್ದಾರೆ.
ಬೀದಿ ಬದಿಯಲ್ಲಿ ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಅವರೇ ಕಚ್ಚಾ ಬಾದಮ್‌ ಹಾಡಿನ ರುವಾರಿ.ಕಡಲೇ ಕಾಯಿ ಮಾರಾಟ ಮಾಡುವ ಸಲುವಾಗಿ ಅವರೇ ಈ ಹಾಡು ಬರೆದು ಹಾಡಿದ್ದರು.ಕಡಲೆ ಕಾಯಿ ಮಾರುತ್ತಾ ಹಾಡು ಹೇಳುತ್ತಿದ್ದ ಭುಬನ್ ಭಡ್ಯಾಕರ್ ಅವರ ವಿಡಿಯೊವನ್ನು 2021 ರಲ್ಲಿ ಯಾರೋ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು. ಕೆಲ ದಿನಗಳಲ್ಲಿ ಅವರ ಹಾಡು ವೈರಲ್‌ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿತ್ತು.

ಬಾದಾಮ್ ಹಾಡು ವೈರಲ್ ಆಗಿದ್ದ ಮೇಲೆ ಭುಬನ್ ಗೆ ಖ್ಯಾತಿ ಹಾಗೂ ಒಂದಿಷ್ಟು ಹಣ ಬಂದಿತ್ತು. ಅದರಿಂದ ಅವರು ದುರ್ಜಾಪುರ್ದಲ್ಲಿ ತಮ್ಮ ಗುಡಿಸಲಿನ ಮನೆ ತೆಗೆದು ಆರ್‌ಸಿಸಿ ಮನೆ ಕಟ್ಟುತ್ತಿದ್ದರು. ಒಂದು ಹೊಸ ಬೈಕ್ ತೆಗೆದುಕೊಂಡಿದ್ದರು.ಆದರೆ ಸದ್ಯ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವುದಂರಿಂದ ಆರ್‌ಸಿಸಿ ಮನೆ ನಿರ್ಮಾಣವನ್ನು ಸ್ಥಗೀತಗೊಳಿಸಿ ಮತ್ತೆ ಬೀದಿ ಬೀದಿ ಅಲೆದು ಕಡಲೆಕಾಯಿ ಮಾರುವ ಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ. ಸದ್ಯ ಅವರು ತಮ್ಮ ಊರನ್ನು ಬಿಟ್ಟು ಅಲ್ಲೊಂದು,ಇಲ್ಲೊಂದು ಕಾರ್ಯಕ್ರಮಗಳಲ್ಲಿ ಮನರಂಜನೆಗಾರರಾಗಿ ಭಾಗವಹಿಸುತ್ತಾ ಪತ್ನಿಯೊಂದಿಗೆ ಭಿರ್‌ಭೂಮ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.