ಮೊದಲ ಪಟ್ಟಿಯಲ್ಲಿ 8 ಮುಸ್ಲಿಂ, ದ.ಕ ಜಿಲ್ಲೆಯ ಮೂರು ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುವುದು ಇನ್ನೂ ನಿಗೂಢ.!

ರಾಜ್ಯ

ವಿಧಾನಸಭಾ ಚುನಾವಣೆ 2023 ರ ದಿನಾಂಕ ಘೋಷಣೆಗೂ ಮುನ್ನ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಹಾಲಿ 61 ಶಾಸಕರಿಗೆ ಟಿಕೆಟ್ ಸಿಕ್ಕಿದೆ. ಗೊಂದಲ ಇರೋ ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೊ ಕುತೂಹಲ ಮನೆ ಮಾಡಿದೆ.ದ.ಕ ಜಿಲ್ಲೆಯ 8 ರಲ್ಲಿ 3 ಕ್ಷೇತ್ರ ಬಾಕಿಯಿದೆ.ಮಂಗಳೂರು ದಕ್ಷಿಣ,ಉತ್ತರ,ಹಾಗೂ ಪುತ್ತೂರು ಇನ್ನೂ ಕಂಗೆಟ್ಟಾಗಿದೆ.ಈಗಾಗಲೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರು ಬಂಡಾಯ ಏಳುವ ಲಕ್ಷಣಗಳು ಕಾಣಿಸುತ್ತಿವೆ. ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಅಂತಿಮವಾಗಿದೆ. ಹಾಲಿ ಶಾಸಕರಾಗಿರುವ ಯತೀಂದ್ರ,ತಂದೆಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಹಾಲಿ ಐವರು ಶಾಸಕರಿಗೆ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಕೋಲಾರ ಮತ್ತು ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ಹೆಸರು ಸಹ ಪ್ರಕಟಿಸಿಲ್ಲ.

ಇನ್ನುಳಿದಂತೆ ಮಂಡ್ಯದ ಐದು ಕ್ಷೇತ್ರಗಳಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುವುದು ಇನ್ನು ನಿಗೂಢವಾಗಿದೆ. ಇತ್ತ ಮಾಜಿ ಸಂಸದೆ ರಮ್ಯಾ ರಾಮನಗರದಿಂದ ಸ್ಪರ್ಧೆ ಮಾಡ್ತಾರಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 124ರಲ್ಲಿ ಎಂಟು ಮುಸ್ಲಿಂ ಕ್ಯಾಂಡಿಡೇಟ್​​ಗಳಿಗೆ ಟಿಕೆಟ್ ಸಿಕ್ಕಿದೆ.

124 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾತಿ ಲೆಕ್ಕಾಚಾರ; ಲಿಂಗಾಯತ 32, ಮುಸ್ಲಿಂ 8, ಕ್ರೈಸ್ತ 1, ಬ್ರಾಹ್ಮಣ 5, ಒಕ್ಕಲಿಗ 19, ಕುಂಬಾರ 1,ಬಂಟ 1, ರೆಡ್ಡಿ 5, ಈಡಿಗ 4, ಪರಿಶಿಷ್ಟ ಜಾತಿ 10,ಮರಾಠಿ 1, ರಜಪೂತ 1, ಕುರುಬ 5, ಓಬಿಸಿ 20. ಒಟ್ಟು 124 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.