ತಲಪಾಡಿ ಗಡಿಭಾಗದ ಆಸುಪಾಸಿನಲ್ಲಿ ಮತ್ತೆ ಚಿಗಿತುಕೊಂಡ ಹೊಸ ಟಾರ್ಗೆಟ್ ಗ್ರೂಪ್.!

ಕರಾವಳಿ

ವಧು,ಅಪ್ಪ,ಅಮ್ಮ,ಅಣ್ಣ,ತಂಗಿ ಎಲ್ಲವೂ ರೆಡಿಮೇಡ್.! ರೆಡಿಮೇಡ್ ಮೂಲಕವೇ ನಡೆಯುತ್ತಿದೆ ಖತರ್ನಾಕ್ ಕಸುಬು.!

ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ದಂಡುಪಾಳ್ಯ ಗ್ಯಾಂಗ್ ಗಿಂತಲೂ ಖತರ್ನಾಕ್ ಆಗಿದ್ದ ಗ್ಯಾಂಗ್ ಆಗಿತ್ತು ಉಳ್ಳಾಲದ ಅಸುಪಾಸಿನ ಒಂದು ಗ್ಯಾಂಗ್. ಭಾರೀ ಜೋರು ಸದ್ದು ಮಾಡುತ್ತಿದ್ದ ಈ ಖತರ್ನಾಕ್ ಗ್ಯಾಂಗ್ ಗೆ ರಾಜಕಾರಣಿಗಳು, ಉದ್ಯಮಿಗಳು ಗಡಗಡ ನಡುಗುತ್ತಿದ್ದರು.ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಕಚೇರಿ ತೆರೆದು ಮಾಡುತ್ತಿದ್ದುದು ಮಾತ್ರ ಅನಾಹುತಕಾರಿ ಕೆಲಸ. ಇವರ ನೆಟ್ ವರ್ಕ್ ಎಷ್ಟು ಜೋರಾಗಿತ್ತೆಂದರೆ ನೂರಕ್ಕೂ ಅಧಿಕ ಯುವಕರು ಮಾತ್ರವಲ್ಲ ಮಹಿಳೆಯರು, ಮಕ್ಕಳು ಇವರ ಗ್ಯಾಂಗಲ್ಲಿ ಇದ್ದರು. ಚೆಂದದ ವಿವಾಹಿತ ಮಹಿಳೆಯರನ್ನು ಮರಳು ಮಾಡಿ ಅವರೊಂದಿಗೆ ಅಶ್ಲೀಲ ಭಂಗಿಯಲ್ಲಿ ಪೋಟೋ ಕ್ಲಿಕ್ಕಿಸಿಕೊಂಡು ಗಂಡನನ್ನೆ ಬ್ಲ್ಯಾಕ್ ಮೇಲ್ ಮಾಡಿ ದುಡ್ಡು ಪೀಕಿಸಿದ ಹಲವು ಪ್ರಕರಣಗಳು ನಡೆದಿತ್ತು. ಕೋಟ್ಯಾಧಿಪತಿಗಳು, ಬಿಲ್ಡರ್ ಗಳ ವೀಕ್ ನೆಸ್ ಅರ್ಥ ಮಾಡಿಕೊಂಡು ಅವರ ಬಳಿ ಹೆಣ್ಣು ಮಕ್ಕಳನ್ನು ಕಳುಹಿಸಿ ಅಶ್ಲೀಲ ಭಂಗಿಯ ಭಾವಚಿತ್ರ ತೆಗೆದು ಅದನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಪೀಕಿಸುತ್ತಿದ್ದ ನಟೋರಿಯಸ್ ಗ್ಯಾಂಗ್ ಆಗಿತ್ತು ಅದು.ಡೀಲಿಂಗ್ ಹೆಸರಿನಲ್ಲಿ ಜಾಗ, ಮನೆ ಮಾರಲು ಸಿದ್ಧವಾದವರೊಂದಿಗೆ ಡೀಲ್ ಕುದುರಿಸುವ ಟಾರ್ಗೆಟ್ ಗಂಡ-ಹೆಂಡತಿಗಳಿಬ್ಬರನ್ನು ರೆಡಿ ಮಾಡಿಕೊಂಡು ಬೇಕಾದ ಮನೆಗೆ ಕಳುಹಿಸಿ ಹನಿ ಟ್ರ್ಯಾಪ್ ಹೆಸರಿನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದರು. ಬ್ಲ್ಯಾಕ್ ಮೇಲ್ ದಂಧೆ ಜೊತೆ ಅಶ್ಲೀಲ, ಅರೆಬೆತ್ತಲೆ ಪೋಟೋ ಕ್ಲಿಕ್ಕಿಸಿ ತಮ್ಮದೇ ನಕಲಿ ರಿಪೋರ್ಟರ್ ತಂಡ ಎಂಟ್ರಿಯಾಗಿ ಸಮಾಜದಲ್ಲಿ ‘ಗಣ್ಯ’ ಸ್ಥಾನದಲ್ಲಿರುವವರನ್ನು ಬೆದರಿಸುತ್ತಿದ್ದರು. ಇದು ಕೇವಲ ಅ ಏರಿಯಾಕ್ಕೆ ಮಾತ್ರ ಸೀಮಿತವಾಗಿರದೆ ದ.ಕ ಜಿಲ್ಲೆಯ ಎಲ್ಲಾ ಕಡೆ ತಮ್ಮ ಕಬಂಧ ಬಾಹು ಚಾಚಿದ್ದರು.

ದಿನಗಳೆದಂತೆ ಈ ಗ್ರೂಪ್ ಹನಿಟ್ರ್ಯಾಫ್, ಹಫ್ತಾ ವಸೂಲಿಗೆ ಮಾತ್ರ ಸೀಮಿತವಾಗದೆ ಗಾಂಜಾ, ಡ್ರಗ್ಸ್ ದಂಧೆ, ಮರ್ಡರ್ ಮಾಫಿಯಾಕ್ಕೂ ಕೈ ಹಾಕಿತು.ಗ್ರೂಪ್ ಇಭ್ಭಾಗವಾಯಿತು. ಕೊನೆಗೆ ಈ ಗ್ರೂಪಿನ ಸ್ಥಾಪಕನ ಹತ್ಯೆಯೊಂದಿಗೆ ಈ ಗ್ರೂಪ್ ತೆರೆಮರೆಗೆ ಸರಿಯಿತು.

ಇದೀಗ ಗಡಿಭಾಗದಲ್ಲಿ ಕೇರಳ ಮೂಲದ ವ್ಕಕ್ತಿಯೊಬ್ಬರು ಹೊಸದೊಂದು ಟಾರ್ಗೆಟ್ ಗ್ರೂಪ್ ಗೆ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂತರನ್ನು ಟಾರ್ಗೆಟ್ ಮಾಡಿ ಅವರಿಗೆ ಚೆಂದದ ಹುಡುಗಿಯರ ಪೋಟೋ ತೋರಿಸಿ ಮದುವೆಯ ಸಂಬಂಧ ಕುದುರಿಸಿ ಬ್ಲ್ಯಾಕ್ ಮೇಲ್ ಮಾಡುವ ಹೊಸ ತಂಡ ಇದಾಗಿದೆ.

ಇವರ ಖತರ್ನಾಕ್ ಕೆಲಸ ಎಂದರೆ ಎರಡನೇ ವಿವಾಹ ಮಾಡ ಬಯಸುವ ಶ್ರೀಮಂತ ವರನನ್ನು ಹುಡುಕಿ ತಂದು ಇವರದ್ದೇ ಆದ ಬಾಡಿಗೆ ಮನೆಯನ್ನು ತೋರಿಸಿ ರೆಡಿಮೇಡ್ ವಧುವಿನ ತಂದೆ, ತಾಯಿ, ಅಣ್ಣ ಹೀಗೆ ನಕಲಿ ಸಂಬಂಧಗಳನ್ನು ಸೃಷ್ಟಿಸಿ ಯಾಮಾರಿಸುವ ಗ್ರೂಪ್ ಇದಾಗಿದೆ. ವರನಿಂದ ಲಕ್ಷ ಬೇಡಿಕೆ ಇಟ್ಟು ಪಡೆದುಕೊಂಡು ನಕಲಿ ಮೌಲ್ವಿಗಳ ಮೂಲಕ ನಿಖಾಹ ಮಾಡಿಕೊಂಡು ಮಹರಿನ ಆಭರಣ ಲಪಟಾಯಿಸುತ್ತಾರೆ. ಒಂದೆರಡು ದಿನಗಳವರೆಗೆ ಮಾತ್ರ ವಧುವಿನ ಜೊತೆ ಮಧುಮಂಚವೇರಲು ಅವಕಾಶ ಕೊಟ್ಟು ತದ ನಂತರ ರೆಡಿಮೇಡ್ ಕುಟುಂಬಿಕರು ನಿನ್ನ ಪತ್ನಿಗೆ ನೀನು ಇಷ್ಟವಿಲ್ಲ, ಇನ್ನೂ ಆಕೆಯ ಮುಖ ನೋಡಲು ಇಲ್ಲಿ ಬರಬಾರದು ಎಂದು ಬೆದರಿಸುವ ಜೊತೆಗೆ ಆತನನ್ನು ಕಿಡ್ನ್ಯಾಪ್ ಮಾಡಿ ಸರಿಯಾಗಿ ತದುಕಿ ಆತನಲ್ಲಿದ್ದ ನಗದು, ವಾಚ್, ಮೊಬೈಲ್ ಕಸಿದು ಬೆದರಿಸಿ ಕಳುಹಿಸಲಾಗುತ್ತದೆ. ಮಾನ ಮರ್ಯಾದೆಗೆ ಅಂಜಿ ಆತ ಪೊಲೀಸ್ ದೂರು ನೀಡಲು ಮುಂದಾಗುವುದಿಲ್ಲ. ಇದನ್ನೇ ಎನ್ ಕ್ಯಾಶ್ ಮಾಡಿಕೊಂಡಿರುವ ತಂಡ ತಲಪಾಡಿ ಗಡಿಭಾಗದ ಆಸುಪಾಸಿನಲ್ಲಿ ಕಾರ್ಯಾಚರಿಸಿ ಹಲವು ಶ್ರೀಮಂತರನ್ನು ಬಲೆಗೆ ಬೀಳಿಸಿ ಹೆಣ್ಣಿನ ಆಸೆ ತೋರಿಸಿ ಮುಂಡಾಮೋಚಿದ ಪ್ರಕರಣಗಳು ನಡೆದಿವೆ.

ಗಡಿಭಾಗದಲ್ಲಿ ಚಿಗಿತುಕೊಂಡಿರುವ ಹೊಸ ಮಿನಿ ಟಾರ್ಗೆಟ್ ಗ್ರೂಪ್ ನಲ್ಲಿ ಕೇರಳ ಮೂಲದ ಇಬ್ಬರು ಹಾಗೂ ಉಳ್ಳಾಲ, ಫರಂಗಿಪೇಟೆ, ಬಂಟ್ವಾಳ ಭಾಗದ ಕೆಲವು ಪುಂಡು ಪೋಕರಿಗಳು ಸಾಥ್ ನೀಡುತ್ತಿರುವುದು ಬೆಳಕಿಗೆ ಬಂದಿದೆ.ತಲಪಾಡಿ ಗಡಿಭಾಗದ ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಂತಹ ಖತರ್ನಾಕ್ ಕೆಲಸಕ್ಕೆ ಕೈ ಹಾಕಿದ್ದು,ಇತ್ತೀಚೆಗೆ ಕೇರಳದ ಶ್ರೀಮಂತ ಮನೆತನದ ಮಧ್ಯವಯಸ್ಕ ಡಾಕ್ಟರ್ ಒಬ್ಬರು ಇವರ ಕೈಯಿಂದ ತಪ್ಪಿಸಿಕೊಂಡು ಮಾಡೂರು ಮಸೀದಿ ಬಳಿ ರಕ್ಷಣೆಗೆ ಮೊರೆ ಇಟ್ಟಾಗ ಅಲ್ಲಿಯ ಸ್ಥಳೀಯ ಯುವಕರು ರಕ್ಷಣೆ ನೀಡಿ,ಖತರ್ನಾಕ್ ಗ್ರೂಪಿನ ಇಬ್ಬರನ್ನು ವಶಕ್ಕೆ ಪಡೆದು ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದರು.

ಇವರಿಗೆ ಬೆಂಬಲವಾಗಿ ನಿಂತ ಈ ಮೊದಲು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಂಟ್ವಾಳದ ನಿವಾಸಿ ಒಂದು ಕೋಮು ಪಕ್ಷದ ಕಾರ್ಯಕರ್ತ ಊರವರ ಮುಂದೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿ ಕೊಂಡಾಗ,ಸುಳ್ಳು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿಕೊಂಡು ನೇರ ಹೊಯ್ಸಳ ಪೋಲೀಸರನ್ನು ತಂದು ಸಿಕ್ಕಿ ಕೊಂಡವರನ್ನು ನಾಗರಿಕರ ಕೈಯಿಂದ ಬಿಡಿಸಿಕೊಂಡು ಹೋದ ಮೇಲೇಯೇ ಇವರ ಮಾನಗೆಟ್ಟ ಚರಿತ್ರೆಯ ಈ ಹಣ ಮಾಡುವ ನಾಟಕ ಕಂಪೆನಿಯ ಒಂದೊಂದು ವಿಚಾರಗಳು ಹೊರ ಬಿದ್ದಿದ್ದು.ಇಂತವರು ಮತ್ತೇ ತಮ್ಮ ನಾಟಕಕ್ಕೆ ನಿಮ್ಮ ಊರಿನ ಬಾಡಿಗೆ ಮನೆಯನ್ನು ಉಪಯೋಗಿಸಿ ಕೊಂಡು ಇಂತಹ ನೀಚ ಕೃತ್ಯಕ್ಜೆ ಬಳಸುವ ಮುನ್ನ ಬಾಡಿಗೆ ಮನೆಯನ್ನು ಯಾರೇ ಬಾಡಿಗೆದಾರರಿಗೆ ನೀಡುವ ಮುನ್ನ ಅವರ ಚಾರಿತ್ರ್ಯವನ್ನು ಅರಿಯ ಬೇಕಾಗಿದೆ ಮತ್ತು ಮುಸ್ಲಿಂ ಸಮುದಾಯದಲ್ಲಿ ಇಂತಹ ಕುಕೃತ್ಯಗಳನ್ನು ಮಾಡುವ,ಕೋಮುವಾದಿ ಪಕ್ಷದೊಂದಿಗೆ ಗುರುತಿಸಿ ಅದರಿಂದ ತಮ್ಮ ಬೇಳೆ ಬೇಯಿಸುವ ನೀಚ ದುಷ್ಟರನ್ನು ಸಮುದಾಯವು ಗುರುತಿಸಿ ಅವರನ್ನು ಸಮಾಜದಿಂದ ದೂರ ಇಡಬೇಕಾಗಿದೆ.