ಮೂಡಬಿದ್ರೆ ತಾಲ್ಲೂಕಿನ ಗಂಟಾಲ್ಕಟ್ಟೆ ಕಲ್ಲಬೆಟ್ಟು ನಿವಾಸಿ ಅಬ್ದುಲ್ ರಹಿಮಾನ್ ರವರು ನಿನ್ನೆ ಸೌದಿ ಅರೇಬಿಯಾದ ದಮ್ಮಾಮ್ ಎಂಬಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಬಂದಿದ್ದರು.
ಇವರು ಕಳೆದ 28 ವರ್ಷಗಳಿಂದ ದುಬೈ, ಸೌದಿ ಅರೇಬಿಯಾ ಸೇರಿದಂತೆ ವಿದೇಶದಲ್ಲಿ ಉದ್ಯೋಗ ನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಇವರ ಅಂತ್ಯ ಸಂಸ್ಕಾರವನ್ನು ದಮ್ಮಾಮಿನಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.