ಚಂಡೀಗಡ:ಮೂಲಭೂತವಾದಿ ಬೋಧಕ ಅಮೃತಪಾಲ್ ಸಿಂಗ್ ಅತನ ಆಪ್ತ ಸಹಾಯಕ ಪಾಪಲ್ಪ್ರೀತ್ ಸಿಂಗ್ ಅವರನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಬಂಧಿಸಲಾಗಿದೆ.ಪಂಜಾಬ್ ಪೊಲೀಸರ ಕಾರ್ಯಾಚರಣೆಯಲ್ಲಿ ಪಾಪಲ್‌ಪ್ರೀತ್ ಸಿಂಗ್ ನನ್ನು ಬಂಧಿಸಲಾಯಿತು.ಪಾಪಲ್‌ಪ್ರೀತ್ ಅಮೃತ್ ಪಾಲ್ ಸಿಂಗ್ ರವರ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದ್ದು,ಪಾಕಿಸ್ತಾನದ ಐಎಸ್‌ಐ ಜತೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.ಮಾರ್ಚ್ 18 ರಿಂದ ಪಂಜಾಬ್ ಪೊಲೀಸರು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ,ಮತ್ತು ಆತನ ಸಹಾಯಕರ ವಿರುದ್ಧದ ಕಾರ್ಯಚರಣೆಗೆ ಇಳಿದಾಗ ಅಮೃತಪಾಲ್ ಮತ್ತು ಪಾಪಲ್ಪ್ರೀತ್ ಪರಾರಿಯಾಗಿದ್ದರು.
ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ಜಲಂಧರ್ ಜಿಲ್ಲೆಯಲ್ಲಿ ವಾಹನಗಳನ್ನು ಬದಲಾಯಿಸುತ್ತಾ ಮತ್ತು ತನ್ನ ಚಲನವಲನವನ್ನು ಬದಲಾಯಿಸುವ ಮೂಲಕ ಪೊಲೀಸ್ ಕೈಯಿಂದ ತಪ್ಪಿಸಿಕೊಂಡಿದ್ದನು. ಆತನ ಮತ್ತು ಆತನ ಸಹಚರರ ಮೇಲೆ ವರ್ಣಭೇದಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಿಕೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.