ಉಳ್ಳಾಲ ತೊಕ್ಕೊಟ್ಟಿನ ನ್ಯೂ ಥ್ರೆಡ್ ಹೌಸ್ ಮಾಲೀಕ, ಕನೀರುತೋಟ ನಿವಾಸಿ ಪ್ರವೀಣ್ ಆಳ್ವಾ ಎಂಬುವರು ಇಂದು ಬೆಳಿಗ್ಗೆ ತಮ್ಮ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 44 ವರ್ಷ ಪ್ರಾಯದ ಪ್ರವೀಣ್ ಆಳ್ವಾ ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್ ಅಂಗಡಿಗಳಿಗೆ ಹೊಲಿಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಾ ಬಂದಿದ್ದು, ಅದರಂತೆ ಕ್ರಿಕೆಟ್ ಬೆಟ್ಟಿಂಗ್ ಹುಚ್ಚು ಹೊಂದಿದ್ದರು ಎನ್ನಲಾಗಿದೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸಾಲದಿಂದಾಗಿ ಆತ್ಮಹತ್ಯೆ ಗೈದಿರುವುದಾಗಿ ಬರೆದಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಹುಚ್ಚು ಹೊಂದಿದ್ದ ಪ್ರವೀಣ್ ಆಳ್ವಾ ನಿನ್ನೆ ರಾತ್ರಿಯ ಐಪಿಎಲ್ ಪಂದ್ಯಾಟದಲ್ಲಿ ಭಾರೀ ಮೊತ್ತದ ಬೆಟ್ಟಿಂಗ್ ನಡೆಸಿದ್ದರು ಎನ್ನಲಾಗಿದೆ. ಅನಿರೀಕ್ಷಿತವಾಗಿ ಇವರ ತಂಡ ಸೋಲು ಕಂಡಿದ್ದು, ಭಾರೀ ಹಣ ಕಳೆದುಕೊಂಡಿದ್ದರು. ಒಂದೆಡೆ ಸಾಲ, ಇನ್ನೊಂದೆಡೆ ಐಪಿಎಲ್ ಬೆಟ್ಟಿಂಗ್ ನಲ್ಲಿ ಸತತ ಕೈ ಸುಟ್ಟುಕೊಂಡಿರುವುದು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕಾಗಿ ಸ್ಥಳೀಯವಾಗಿ ಕೇಳಿ ಬರುತ್ತಿದೆ.