ಶಾಸಕ ರಾಜು ಪಾಲ್ ಹತ್ಯೆ ಪ್ರಮುಖ ಸಾಕ್ಷಿ, ಉಮೇಶ್ ಪಾಲ್ ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಮಾಫಿಯಾ ಗ್ಯಾಂಗ್‌ನ್ನು ನಿರ್ಣಾಮ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಪಥ ಮಾಡಿದ ಬೆನ್ನಲ್ಲೇ ಯುಪಿ ಪೊಲೀಸರು ಉಮೇಶ್ ಪಾಲ್ ಹತ್ಯೆ ಆರೋಪಿಗಳನ್ನು ಹುಡುಕಿ ಹುಡುಕಿ ಹತ್ಯೆಗೈದಿದ್ದಾರೆ.ರಾಜು ಪಾಲ್ ಹತ್ಯೆ ಮಾಡಿದ ಅಪರಾಧಿ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ನನ್ನು ಒಂದೊಂದು ವಾರ ಒಂದೊಂದು ಜೈಲಿಗೆ ಕರೆದೊಯ್ಯಲಾಗುತ್ತಿದೆ. ಇದರ ಬೆನ್ನಲ್ಲೇ ಉಮೇಶ್ ಪಾಲ್ ಕೊಲೆ ಆರೋಪಿ,ಅತೀಕ್ ಅಹಮ್ಮದ್ ಪುತ್ರ ಅಸಾದ್ ಹಾಗೂ ಮತ್ತೊರ್ವ ಆರೋಪಿ ಮಕ್ಸೂಸದನ ಪುತ್ರ ಗುಲಾಂ ಇವರಿಬ್ಬರನ್ನು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ಎನ್‌ಕೌಂಟರ್ ಮಾಡಿದ್ದಾರೆ.
ಅಸಾದ್ ಹಾಗೂ ಗುಲಾಂ ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಉಮೇಶ್ ಪಾಲ್ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಇವರಿಬ್ಬರ ತಲೆಗೆ ಉತ್ತರ ಪ್ರದೇಶ ಸರ್ಕಾರ 5 ಲಕ್ಷ ರೂಪಾಯಿ ಘೋಷಿಸಿತ್ತು. ಇದೀಗ ಇಬ್ಬರನ್ನು ಎನ್‌ಕೌಂಟರ್ ಮಾಡಿ ಮುಗಿಸಿ ಬಿಟ್ಟಿದೆ.