ಕರ್ನಾಟಕದ ವಿಧಾನಸಭೆ ಮೇ 10 ರಂದು ಬುಧವಾರ ಚುನಾವಣೆ ನಡೆಯಲಿದೆ. ಮತದಾನಕ್ಕೆ 4 ದಿನಗಳು ಬಾಕಿ ಇರುವಾಗ ಲೋಕ್ ಪೂಲ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಮುಖಭಂಗವಾಗಲಿದೆ ಎಂಬ ಸಮೀಕ್ಷೆಯ ವರದಿ ತಿಳಿಸಿದೆ.2023ರ ಚುನಾವಣೆಯ ಕುರಿತು ಅಂತಿಮ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶದಂತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್ ನಂಬರ್ 113 ಚುನಾವಣೆಗೆ 4 ದಿನಗಳು ಇರುವಾಗ ಪ್ರಕಟಗೊಂಡ ಸಮೀಕ್ಷೆ ಫಲಿತಾಂಶ ಆಡಳಿತ ಪಕ್ಷಕ್ಕೆ ನಿರಾಸೆ ಉಂಟು ಮಾಡಿದೆ. ಪ್ರತಿಪಕ್ಷ ಕಾಂಗ್ರೆಸ್‌ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಚುನಾವಣಾ ಪೂರ್ವ ಸಮೀಕ್ಷೆಯ ಅಂತಿಮ ವರದಿಯಂತೆ ಬಿಜೆಪಿ 59-65,ಕಾಂಗ್ರೆಸ್ 129 ರಿಂದ 134, ಜೆಡಿಎಸ್ ಪಕ್ಷ 23 ರಿಂದ 28 ಸ್ಥಾನಗಳು ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಯ ಅಂತಿಮ ವರದಿ ಅಂದಾಜಿಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಸ್ಪಷ್ಟ ಬಹುಮತದ ಸರ್ಕಾರ ರಚನೆ ಮಾಡಲಿದೆ ಎಂಬ ಮಾಹಿತಿ ಇದೆ.
ಫೆಬ್ರವರಿ ತಿಂಗಳ ಸಮೀಕ್ಷೆಯಲ್ಲಿ ಬಿಜೆಪಿ 77-83,ಮಾರ್ಚ್ ತಿಂಗಳ ಸಮೀಕ್ಷೆಯಲ್ಲಿ 66-69 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಅಂದಾಜಿಲಾಗಿತ್ತು.ಇಂದು ಪ್ರಕಟವಾಗಿರುವ ಸಮೀಕ್ಷೆ 59-65 ಸೀಟುಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಹೇಳಿದೆ.ಕಾಂಗ್ರೆಸ್ ಪಕ್ಷ ಫೆಬ್ರವರಿ ಸಮೀಕ್ಷೆಯಲ್ಲಿ 116-122, ಮಾರ್ಚ್‌ನಲ್ಲಿ 128-131,ಶನಿವಾರದ ಅಂತಿಮ ಫಲಿತಾಂಶದಲ್ಲಿ 129-134 ಸ್ಥಾನಗಳಲ್ಲಿ ಗೆಲುವು ಎಂದು ಅಂದಾಜಿಸಲಾಗಿದೆ.ಜೆಡಿಎಸ್ ಫೆಬ್ರವರಿಯಲ್ಲಿ 21-27,ಮಾರ್ಚ್‌ನಲ್ಲಿ 21-25, ಮೇ 6ರ ಸಮೀಕ್ಷೆಯಂತೆ ಪಕ್ಷಕ್ಕೆ 23-28 ಸೀಟು ನೀಡಿದೆ. ಇತರರು ಫೆಬ್ರವರಿಯಲ್ಲಿ 1-4, ಮಾರ್ಚ್‌ನಲ್ಲಿ 0-2 ಅಂತಿಮ ಸಮೀಕ್ಷೆಯಲ್ಲಿ 0-2 ಸ್ಥಾನಗಳಲ್ಲಿ ಗೆಲುವು ಎಂದು ಅಂದಾಜಿಸಿದೆ.
ಮೇ 10 ರ ಬುಧವಾರ ಕರ್ನಾಟಕ ರಾಜ್ಯದ 224 ಸ್ಥಾನಗಳಿಗೆ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು,ಸಂಜೆ 6 ರ ತನಕ ಮತದಾನ ಮಾಡಲು ಅವಕಾಶವಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಬಹಳ ಜೋರಾಗಿದ್ದು,ಕೇಂದ್ರದ ಘಟಾನುಘಟಿ ನಾಯಕರ ರಂಗ ಪ್ರವೇಶದಿಂದ ಪ್ರಚಾರದ ಭರಾಟೆ ಬಹಳ ಅಬ್ಬರವಾಗಿ ನಡೆಯುತ್ತಿದೆ. ಮೇ 8ರಂದು ಬಹಿರಂಗ ಪ್ರಚಾರ ಕೊನೆ ದಿನವಾಗಿದ್ದು,ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಿ ಬಹುಮತ ಪಡೆದ ಪಕ್ಷ ಗದ್ದುಗೆ ಏರಲಿದೆ.