✍️. ಮುನೀರ್ ಕಾಟಿಪಳ್ಳ
ಸ್ಪೀಕರ್ ಯು ಟಿ ಖಾದರ್ ನೂತನ ಶಾಸಕರಿಗೆ ಏರ್ಪಡಿಸಿರುವ ಶಿಬಿರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಡೆ, ಕಾರ್ಪೊರೇಟ್ ಆಧ್ಯಾತ್ಮದ ವ್ಯಾಪಾರಿ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಯ್ಕೆ ಮಾಡಿದ್ದಾರೆ.

ಕೋಮುವಾದಿ ಸರಕಾರವನ್ನು ಸೋಲಿಸಲು ನಿಸ್ವಾರ್ಥವಾಗಿ ನಿರಂತರ ಶ್ರಮಿಸಿದ ನಾಡಿನ ಖ್ಯಾತನಾಮ ಸಾಹಿತಿಗಳೂ, ಉಪನ್ಯಾಸಕರೂ, ಬರಹಗಾರರೂ ಆದಂತಹ ದೇವನೂರ ಮಹಾದೇವ, ರಹಮತ್ ತರೀಕೆರೆ, ಜಸ್ಟೀಸ್ ನಾಗಮೋಹನ ದಾಸ್, ಪುರುಷೋತ್ತಮ ಬಿಳಿಮಲೆ, ಡಾ. ವಿಜಯಮ್ಮ, ಬರಗೂರು ರಾಮಚಂದ್ರಪ್ಪ,ಬಂಜಗೆರೆ ಜಯಪ್ರಕಾಶ ಮತ್ತಿತರರು ಇನ್ನು ಹಿಮಾಲಯಕ್ಕೆ ಹೊರಡುವುದು ಲೇಸು. ಅವರ ಮಾತುಗಳು “ಸೆಕ್ಯುಲರ್” ಸರಕಾರದ ಸಂದರ್ಭದಲ್ಲೂ ಪ್ರೇರಣೆ ಪಡೆಯುವಂತದ್ದಲ್ಲ, ಅದರ ಅಗತ್ಯ ಕರ್ನಾಟಕದ ಶಾಸಕರುಗಳಿಗೆ ಇಲ್ಲ ಎಂದು ಗೌರವಾನ್ವಿತ ಸ್ಪೀಕರ್ ರೂಲಿಂಗ್ ನೀಡಿದಂತಾಗಿದೆ.
