ಆಧಾರ್ ಕಾರ್ಡ್ ನಂಬರ್ ಗೆ ಪಾನ್ ಕಾರ್ಡ್ ಲಿಂಕ್ ಮಾಡಲು ನೀಡಲಾಗಿರುವ ಅವಧಿ ಮುಕ್ತಾಯವಾಗಲು ಕೇವಲ 2 ದಿನಗಳ ಕಾಲ ಬಾಕಿಯಿದ್ದು, ಅದರೊಳಗೆ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ಅಮಾನ್ಯ ವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
1 ಸಾವಿರ ರೂಪಾಯಿ ದಂಡದೊಂದಿಗೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ನೀಡಲಾಗಿದ್ದ ಅವಧಿ ಜೂನ್ 30 ಕ್ಕೆ ಮುಕ್ತಾಯವಾಗಲಿದೆ. ಇದಾದ ಬಳಿಕ ಪಾನ್ ಕಾರ್ಡ್ ನಿಷ್ಕ್ರೀಯವಾಗಲಿದ್ದು, ಬ್ಯಾಂಕಿಂಗ್ ವ್ಯವಹಾರ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ.
ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್ ಗಳನ್ನು ತೆರೆಯಲು ಪಾನ್ ಕಾರ್ಡ್ ಅವಶ್ಯಕವಾಗಿದ್ದು, ಒಂದು ವೇಳೆ ಜೂನ್ 30 ರೊಳಗೆ ಜೋಡಣೆ ಮಾಡದಿದ್ದರೆ ಈ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಅಲ್ಲದೇ ಈ ದಿನಾಂಕದ ಬಳಿಕ ಆಧಾರ್ ಮತ್ತು ಪಾನ್ ಲಿಂಕ್ ಮಾಡಿಸಲು ಸುಮಾರು 10 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಆಧಾರ್ ಪ್ಯಾನ್ ಜೋಡಣೆಗೆ ನೀಡಲಾಗಿದ್ದ ಅಂತಿಮ ದಿನವನ್ನು ಮಾರ್ಚ್ 31 ರಿಂದ ಜೂನ್ 30 ಕ್ಕೆ ಮುಂಡೂಡಲಾಗಿತ್ತು.