ದುಡಿಯಲು ಸಮರ್ಥವಿರುವಂತಹ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಮಾತ್ರವಲ್ಲದೆ ಕೆಳಗಿನ ನ್ಯಾಯಾಲಯ ಅದೇಶಿಸಿದ ಜೀವನಾಂಶ ಮೌಲ್ಯವನ್ನು ಕಡಿತಗೊಳಿಸಿ ಆದೇಶ ನೀಡಿದೆ.ಈ ಸಂಬಂಧ ಅರ್ಜಿಯೊಂದರ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಮಿಕರ್ ಅವರ ನ್ಯಾಯಪೀಠವು, ಪತಿಯೊಂದಿಗೆ ವಿವಾಹಕ್ಕೆ ಮುನ್ನ ಉದ್ಯೊಗದಲ್ಲಿದ್ದ ಪತ್ನಿ, ಈಗ ಕೆಲಸ ಬಿಟ್ಟು ಮನೆಯಲ್ಲಿ ಇರುವುದಕ್ಕೆ ಸಕಾರಣವಿಲ್ಲ. ಹೀಗಾಗಿ ದುಡಿಯಲು ಸಮರ್ಥವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿತು.
ಪತ್ನಿಗೆ ಕೋರ್ಟ್ ಜೀವನಾಂಶ ಭತ್ಯೆಯಾಗಿ ನೀಡುತ್ತಿದ್ದಂತ ಪ್ರತಿ ತಿಂಗಳ ಮೊತ್ತವನ್ನು 10 ಸಾವಿರ ರೂಪಾಯಿಯನ್ನು 5,000 ಇಳಿಕೆ ಮಾಡಿದೆ.ಆಲಸ್ಯದಿಂದ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಭತ್ಯೆ ಕೇಳುವಂತಿಲ್ಲ ಎಂಬುದಾಗಿ ಹೇಳಿದೆ. ಈ ಮೂಲಕ ದುಡಿಯಲು ಸಮರ್ಥವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರಿದ್ದಂತ ಮಹಿಳೆಗೆ ಬಿಗ್ ಶಾಕನ್ನು ಕರ್ನಾಟಕ ಹೈಕೋರ್ಟ್ ನೀಡಿದೆ.
ಕೆಲಸ ಬಿಟ್ಟು ಮನೆಯಲ್ಲಿ ಕುಳಿತಿದ್ದಂತಹ ಪತ್ನಿಯೊಬ್ಬರು, ಪತಿಯಿಂದ ಸಂಪೂರ್ಣ ಜೀವನಾಂಶ ಭತ್ಯೆ ನೀಡುವಂತೆ ಕೋರಿದ್ದರು. ಅವರು ಕೆಲಸಕ್ಕೆ ಹೋಗದೆ ಇರುವುದಕ್ಕೆ ಸಕಾರಣ ಕೂಡ ನೀಡಿರಲಿಲ್ಲ. ಈಗಾಗಲೇ ಮಾಸಿಕ ರೂಪಾಯಿ 10,000 ಜೀವನಾಂಶ ಭತ್ಯೆಯನ್ನು ಪತಿಯಿಂದ ಪಡೆಯುತ್ತಿದ್ದಂತ ಪತ್ನಿ, ಈಗ ಮತ್ತೆ ಅದನ್ನು ಹೆಚ್ಚಳ ಮಾಡುವಂತೆ ಹೈಕೋರ್ಟ್ ಮೆಟ್ಟಲೇರಿದ್ದರು.ಇದೀಗ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.