ಕರಾವಳಿ ಭಾಗದಲ್ಲಿ ದರ್ಪ ತೋರುತ್ತಿರುವ KSRTC ಬಸ್ ನ ಕೆಲವು ನಿರ್ವಾಹಕರು.!

ಕರಾವಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಾದ್ಯಂತ ಈ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಪ್ರಯಾಣಿಕರಿಲ್ಲದೆ ಮೂಲೆ ಸೇರಿದ್ದ ಸರಕಾರಿ ಬಸ್ ಗಳು ಈ ಯೋಜನೆಯಿಂದ ದಡ ಸೇರಿದ್ದು, ಸರಕಾರಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಕೇವಲ ಮಹಿಳಾ ಪ್ರಯಾಣಿಕರು ಮಾತ್ರವಲ್ಲ ಪುರುಷರೂ ಕೂಡ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ನಷ್ಟದ ಸುಳಿಗೆ ಸಿಲುಕಿದ್ದ ಸಾರಿಗೆ ಇಲಾಖೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಭರಪೂರ ಲಾಭ ಪಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಸರಕಾರಿ ಬಸ್ ಗಳಿಗಿಂತ ಖಾಸಗಿ ಬಸ್ ಗಳ ದರ್ಬಾರ್ ಅಧಿಕ. ಕೇವಲ ಸೀಮಿತ ಪ್ರದೇಶಗಳಲ್ಲಿ ಮಾತ್ರ ಸರಕಾರಿ ಬಸ್ ಓಡಾಡುತ್ತಿವೆ. ಗಲ್ಲಿಗಲ್ಲಿಗಳಲ್ಲೂ ಖಾಸಗಿ ಬಸ್ ನವರದ್ದೇ ಪ್ರಾಬಲ್ಯ. ಸರಕಾರದ ಈ ಯೋಜನೆ ಕರಾವಳಿ ಭಾಗದಲ್ಲಿ ಸಂಪೂರ್ಣ ಯಶಸ್ಸು ಕಾಣಲು ಇವು ತೊಡಕಾಗಿದೆ. ಆದರೆ ಬೆಳ್ತಂಗಡಿ, ಪುತ್ತೂರು, ಸುಬ್ರಹ್ಮಣ್ಯ, ಧರ್ಮಸ್ಥಳ ಈ ಭಾಗಗಳಲ್ಲಿ ಬಹುತೇಕ ಸರಕಾರಿ ಬಸ್ ಓಡಾಡುತ್ತಿದೆ. ಈ ಭಾಗದಲ್ಲಿ ಜನರು KSRTC ಬಸ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ಸೀಮಿತ ಸಂಖ್ಯೆಯಲ್ಲಿ ಇರುವ ಸರಕಾರಿ ಬಸ್ ಗಳಲ್ಲಿ ಕೆಲವು ನಿರ್ವಾಹಕರ ದರ್ಪದ ನಡವಳಿಕೆಯಿಂದ ಪ್ರಯಾಣಿಕರು ತೊಂದರೆಗೆ ಸಿಲುಕುವಂತಾಗಿದೆ. ಭಾನುವಾರ ದಂದು ಮಂಗಳೂರು ನಿಂದ ಬೆಳ್ತಂಗಡಿಗೆ ಪ್ರಯಾಣ ಬೆಳೆಸುತ್ತಿದ್ದ ಮುಸ್ಲಿಂ ಮಹಿಳೆಯ ಕುಟುಂಬಕ್ಕೆ ರಾಜ್ಯ ಸಾರಿಗೆ ಬಸ್ KA19F3065 ನಿರ್ವಾಹಕ ಬೇಜವಾಬ್ದಾರಿ ವರ್ತನೆ ತೋರಿದ್ದು ಇದರ ಬಗ್ಗೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿರುವ ಪ್ರಸಂಗ ನಡೆದಿದೆ.

ಮಂಗಳೂರುನಿಂದ ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದ್ದ ಮುಸ್ಲಿಂ ತಾಯಿ ಅಧಾರ್ ಕಾಡ್೯ ತೋರಿಸಿ, ಏಳನೇ ಹಾಗೂ ನಾಲ್ಕನೇ ತರಗತಿ ಓದುತ್ತಿರುವ ತನ್ನ ಎರಡು ಹೆಣ್ಣು ಮಕ್ಕಳು ಅಧಾರ್ ಕಾಡ್೯ ತೋರಿಸಿಲ್ಲ ಎಂಬ ಕಾರಣಕ್ಕೆ ರಸ್ತೆ ಮಧ್ಯೆ ಎಲ್ಲರ ಎದುರು ಬಸ್ ನಿರ್ವಾಹಕ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವುದಾಗಿ ಮಹಿಳೆಯೊಬ್ಬರು ದೂರಿಕೊಂಡಿದ್ದಾರೆ.

ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಿದ್ದು ಈ ಬಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕನಿಗೆ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಪ್ರಯಾಣಕ್ಕೆ ಅವಕಾಶ ನೀಡುದಿಲ್ಲ ಎಂದು ಬಸ್ ನಿಂದ ಕೆಳಗಿಳಿಸುವ ಪ್ರಯತ್ನ ಮಾಡಿದ್ದು. ನಂತರ ಎರಡು ಮಕ್ಕಳಿಗೆ ಐವತ್ತೆಂಟು ರೂಪಾಯಿಯ ಎರಡು ಟಿಕೇಟ್ ಪಡೆದ ನಂತರ ಪ್ರಯಾಣಕ್ಕೆ ಅವಕಾಶ ನೀಡಿದ್ದಾನೆ. ರಾಜ್ಯದಲ್ಲಿ ಎಲ್ಲಾ ಕಡೆ ಮಹಿಳೆಯರು ಉಚಿತ ಪ್ರಯಾಣ ಬೆಳೆಸುತ್ತಿದ್ದೂ ಮಂಗಳೂರು ಬಸ್ ನಲ್ಲಿ ಮಾತ್ರ ಒಂದು ಸಮುದಾಯದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್ ನ ನಿರ್ವಾಹಕ ಅಡ್ಡಿ ಪಡಿಸಿದ್ದು ಇದು ರಾಜ್ಯದಲ್ಲಿ ರುವ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲು ಕೆಲವು ಕೋಮುವಾದಿ ಸರ್ಕಾರಿ ನೌಕರರು ಈಗಾಗಲೇ ತಯಾರಿ ನಡೆಸಿದ್ದು ಇದರ ಒಂದು ಭಾಗವಾಗಿದೆ. ಇದರ ಬಗ್ಗೆ ಮಾನ್ಯ ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ತಪ್ಪಿತಸ್ತ ಬಸ್ ನಿರ್ವಾಹಕನ ವಿರುದ್ಧ ಮತ್ತು ಸಹಕರಿಸಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.