ಸೂಚನಾ ಪಲಕವಿಲ್ಲ, ಮುಂಜಾಗ್ರತಾ ಕ್ರಮ ವಹಿಸಿಲ್ಲ. ರಿಪ್ಲೆಕ್ಟರ್ ಅಳವಡಿಸಿಲ್ಲ. ಅವೈಜ್ಞಾನಿಕ ಕಾಮಗಾರಿ.!
ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣದ ಅಸಮರ್ಪಕತೆ ಒಂದೊಂದಾಗಿಯೇ ಬಯಲಿಗೆ ಬರುತ್ತಿದೆ. ಗುರುಪುರ ಕೈಕಂಬ ಬಳಿ ಮಳೆಗೆ ಅನಾವರಣಗೊಂಡ ರಸ್ತೆ ಅವ್ಯವಸ್ಥೆ, ಇದೀಗ ಕಾರ್ಕಳ ಬೆಳುವಾಯಿಯಲ್ಲಿಯೂ ಅಸಮರ್ಪಕತೆ ಎದ್ದು ಕಾಣುತ್ತದೆ. ಬೆಳುವಾಯಿ ಪೇಟೆಯಲ್ಲಿ ಅಸಮರ್ಪಕ ಹೆದ್ದಾರಿ ಕಾಮಗಾರಿಯಿಂದ ನಿನ್ನೆ ಬೆಳಿಗ್ಗೆ ಸ್ಕೂಟರ್ ಸವಾರರೊಬ್ಬರು ಉರುಳಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ಕುಪಿತಗೊಂಡ ಸ್ಥಳೀಯರು ಹೆದ್ದಾರಿ ಕಾಮಗಾರಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಮೂಡುಬಿದಿರೆಯ ಉದ್ಯಮಿ ವಿನೋದ್ ಕುಮಾರ್ ಎಂಬವರು ಸ್ಕೂಟರ್ ನಲ್ಲಿ ಬೆಳುವಾಯಿಗೆ ಬಂದಿದ್ದು ವಾಪಾಸ್ ತೆರಳುವ ವೇಳೆ ತಿರುವಿನಲ್ಲಿ ಡಿಢೀರ್ ಆಗಿ ರಸ್ತೆಗೆ ಸಿಮೆಂಟ್ ಸುರಿದು ಹಂಪ್ಸ್ ಮಾಡಲಾಗಿತ್ತು. ಈ ವೇಳೆ ವಿನೋದ್ ಕುಮಾರ್ ಸ್ಕೂಟರ್ ಸಹಿತ ನೆಲಕ್ಕೆ ಬಿದ್ದಿದ್ದು ಹೆದ್ದಾರಿ ಕಾಮಗಾರಿಯ ಲಾರಿ ಇವರ ಸಮೀಪಕ್ಕೆ ಬಂದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಡಿಢೀರ್ ಆಗಿ ಪ್ರತಿಭಟನೆ ನಡೆಸಿದರು.ಅಸಮರ್ಪಕ, ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರಿಗೆ, ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು ಗುತ್ತಿಗೆದಾರರು ಕ್ಯಾರೆ ಮಾಡಲ್ಲ.ಸ್ಥಳೀಯರಿಗೆ ತೊಂದರೆ ಆಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು.
ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾಣೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಕುಠಿತವಾಗಿ ಸಾಗುತ್ತಿದೆ.ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ.ಇಲ್ಲಿ ನಡೆಯುವ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಇದಕ್ಕೆ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಿರುತ್ತಾರೆ.
ಕಾಮಗಾರಿ ನಡೆಯುವ ಪರಿಸರದಲ್ಲಿ ಸೂಚನಾ ಪಲಕವಿಲ್ಲ,ಮುಂಜಾಗ್ರತಾ ಕ್ರಮ ವಹಿಸಿಲ್ಲ.ರಿಪ್ಲೆಕ್ಟರ್ ಅಳವಡಿಸಿಲ್ಲ, ಕಾನೂನು ರೀತಿಯಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ.ಶಾಲಾ ಮಕ್ಕಳಿಗೆ,ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.