ಅಲ್ಪಸಂಖ್ಯಾತರ ಶಿಷ್ಯವೇತನ ಕಾರ್ಯಕ್ರಮದಲ್ಲಿ ಕಳೆದ 5 ವರ್ಷದಲ್ಲಿ 144.5 ಕೋಟಿ ರೂ. ದುರ್ಬಳಕೆ ಆಗಿದ್ದು, ನಕಲಿ ದಾಖಲೆಗಳ ಮೂಲಕ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ವರದಿಯಲ್ಲಿ ಬಹಿರಂಗವಾಗಿದೆ. ಸಿಬಿಐ ತನಿಖೆಯಲ್ಲಿ ಅಲ್ಪ ಸಂಖ್ಯಾತ ಕಾರ್ಯಕ್ರಮಗಳಲ್ಲಿ ಶೇ.53ರಷ್ಟು ಭ್ರಷ್ಟಾಚಾರ ನಡೆದಿದ್ದು, ಸುಮಾರು 830 ಸಂಸ್ಥೆಗಳಿಂದ ನಕಲಿ ದಾಖಲೆ ಮೂಲಕ ಅರ್ಹರಿಗೆ ಶಿಷ್ಯವೇತನ ನೀಡದೇ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಅಲ್ಪಸಂಖ್ಯಾತರ ವ್ಯವಹಾರಗಳ ಅಧಿಕಾರಿಗಳು ನೀಡಿದ ದೂರಿನ ಅನ್ವಯ ನಡೆದ ಸಿಬಿಐ 34 ರಾಜ್ಯಗಳ 100 ಜಿಲ್ಲೆಗಳಲ್ಲಿ ತನಿಖೆ ನಡೆಸಿತು. 1572 ಸಂಸ್ಥೆಗಳ ಪೈಕಿ 830 ಸಂಸ್ಥೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಬಿಐ ವರದಿ ನೀಡಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತ ಸಚಿವಾಲಯ ಹೇಳಿದೆ.
ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಯೋಜನೆಯಲ್ಲಿ 1.80 ಲಕ್ಷ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಸಿಬಿಐ ವರದಿ ಹಿನ್ನೆಲೆಯಲ್ಲಿ 830 ಸಂಸ್ಥೆಗಳ ಹಣದ ವ್ಯವಹಾರಕ್ಕೆ ನಿರ್ಬಂಧ ವಿಧಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ