ಬೀದಿ ವ್ಯಾಪಾರಿಗಳಿಗಾಗಿರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುವುದು ಎಷ್ಟು ಸರಿ: ಬಿ.ಕೆ ಇಮ್ತಿಯಾಝ್

ಕರಾವಳಿ

ಬೀದಿಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿಗಳ ಸ್ವ ನಿಧಿ ಸಾಲ ಯೋಜನೆಗೆ ಮಂಗಳೂರು ಮಹಾ ನಗರದಲ್ಲಿ ಈಗಾಗಲೇ 4000ಕ್ಕೂ ಹೆಚ್ಚು ಜನರಿಗೆ (ಬಹುತೇಕರು ಬೀದಿ ವ್ಯಾಪಾರಿಗಳಲ್ಲ) ಸಾಲ ನೀಡಲಾಗಿದೆ. ಮತ್ತೆ ನಾಳೆ ಪುರಭವನದಲ್ಲಿ ಮತ್ತೆ ಬೀದಿ ವ್ಯಾಪಾರಿಗಳಿಗೆ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಮಂಗಳೂರು ಮಹಾ ನಗರದಲ್ಲಿ 3000ಜನರಿಗೆ ಸಾಲ ಕೊಡುವ ಗುರಿ ನೀಡಲಾಗಿದೆ.

2021ರಲ್ಲಿ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ 1053 ಜನರನ್ನು ಗುರುತಿಸಿದ್ದರು ಅದರಲ್ಲಿ ನಿಯಮಾನುಸಾರ ವ್ಯಾಪಾರ ನಡೆಸುವ 667ಮಂದಿ ಅರ್ಹರೆಂದು ಅಧಿಕೃತ ಬೀದಿ ವ್ಯಾಪಾರಿಗಳೆಂದು ಗುರುತಿಸಿ ಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರಕ್ಕೆ ಅನುಮೋದನೆ ನೀದಿತ್ತಾದರೂ ಇದುವರೆಗೂ ಐಡಿ ಕಾರ್ಡ್ ವಿತರಣೆ ಮಾಡಿಲ್ಲ.
ಈಗ ಸಾಲ ಮೇಳದ ಗುರಿ 3000 ಜನರಿಗೆ ಈ ಹಿಂದೆ ಸಾಲ ಪಡೆದವರು 4000ಮಂದಿ ಒಟ್ಟು 7000ಮಂದಿ ಆಗುತ್ತಾರೆ ಅಧಿಕೃತ 667 ಬೀದಿ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡಲಾಗದ ಪಾಲಿಕೆ ಸಾಲ ಮೇಳದ ಮೂಲಕ ಚುನಾವಣಾ ತಯಾರಿ ನಡೆಸುವವರಿಗೆ ಸಹಾಯ ಮಾಡುತ್ತಿದೆ ಅಷ್ಟೇ. ಸ್ವನಿಧಿ ಸಾಲ ಪಡೆದ ಜನರೆಲ್ಲರೂ ಐಡಿ ಕಾರ್ಡ್ ಕೇಳಿದರೆ ಪಾಲಿಕೆ ಕೊಡಲೇಬೇಕಾಗುತ್ತದೆ.ವ್ಯಾಪಾರಕ್ಕೂ ಜಾಗವನ್ನು ಕೊಡಬೇಕಾಗುತ್ತದೆ

ಬೀದಿ ವ್ಯಾಪಾರಿಗಳಿಗಾಗಿರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುವುದು ಎಷ್ಟು ಸರಿ