ಪ್ರಕರಣಗಳ ಇತ್ಯರ್ಥಕ್ಕೆ ತಹಶೀಲ್ದಾರ್ ಕೋರ್ಟ್ ಗೆ 3 ತಿಂಗಳು, ಜಿಲ್ಲಾಧಿಕಾರಿಗೆ 1 ವರ್ಷದ ಗಡುವು: ಸಿಎಂ ಸಿದ್ದರಾಮಯ್ಯ ಆದೇಶ

ರಾಜ್ಯ

ನಿನ್ನೆ ಇಡೀ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸವನ್ನು ಮಾಡಿದರು. ಡಿಸಿ, ಸಿಇಒಗಳ ಜೊತೆಗೆ ಸಭೆ ನಡೆಸಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಇದಷ್ಟೇ ಅಲ್ಲದೇ ಕೇಸುಗಳ ಇತ್ಯರ್ಥಕ್ಕೆ ತಹಶೀಲ್ದಾರ್ ಕೋರ್ಟ್ ಗೆ ಮೂರು ತಿಂಗಳು, ಡಿಸಿ ಕೋರ್ಟ್ ಗೆ 1 ವರ್ಷ ಗಡುವು ನೀಡಿದ್ದಾರೆ. ಜನ ಸಣ್ಣಪುಟ್ಟ ಸಮಸ್ಯೆಗೆ ಸಿಎಂ ಕಚೇರಿಗೆ ಬರೋದನ್ನ ತಪ್ಪಿಸುವಂತೆ ಸೂಚಿಸಿದ್ದಾರೆ.

ಇನ್ನೂ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಎಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು. ತಮ್ಮ ಕಚೇರಿಗೆ ಹೋಗಲೇಬೇಕು. ವಾರಕ್ಕೊಮ್ಮೆ ತಾಲ್ಲೂಕು ಮಟ್ಟದ ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳು ಸಭೆ ನಡೆಸುವಂತೆ ತಾಕೀತು ಮಾಡಿದ್ದಾರೆ.

ಮನುಷ್ಯತ್ವ ಇಲ್ಲದವರು ಜನರ ಸೇವೆಗೆ ಬರಲೇಬಾರದು. ಜನರ ಅರ್ಜಿ ಇತ್ಯರ್ಥ ವಿಳಂಬ ಮಾಡೋದು ಭ್ರಷ್ಟಾಚಾರವೇ ಸರಿ. ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಗ್ರಾಮ ಪಂಚಾಯ್ತಿಯಲ್ಲೇ ಇರಬೇಕು. ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದರೇ ಡಿಸಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.