ಕೇರಳದಲ್ಲಿ ನಿಫಾ ಅಬ್ಬರ: ಕೋಯಿಕ್ಕೋಡ್ ನಲ್ಲಿ ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಬಂದ್

ರಾಷ್ಟ್ರೀಯ

ಕೊರೊನಾ ದಂತೆ ಕೇರಳದಲ್ಲಿ ಈ ಬಾರಿ ನಿಫಾ ವೈರಸ್ ಹಾವಳಿ ಇಟ್ಟಿದ್ದು, ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಒಂದು ವಾರಗಳ ಕಾಲ ಮುಚ್ಚಲು ಆದೇಶಿಸಲಾಗಿದೆ. ಇದರ ಜೊತೆಗೆ ಮಸೀದಿ, ಚರ್ಚ್, ದೇವಸ್ಥಾನಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ಕೊರೊನಾ ವೈರಸ್ ಅಬ್ಫರ ಇದ್ದ ಸಂದರ್ಭದಲ್ಲಿ ಇದ್ದಂತಹ ಪರಿಸ್ಥಿತಿಯನ್ನು ಕೋಯಿಕ್ಕೋಡ್ ಜನತೆ ಎದುರಿಸುವಂತಾಗಿದೆ.

ಕೇರಳದಲ್ಲಿ ಒಟ್ಟು 6 ನಿಫಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಗಸ್ಟ್ 30 ರಂದು ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 17 ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದರಿಂದ ಸೋಂಕಿತರ ಸಂಪರ್ಕದಲ್ಲಿದ್ದ 1080 ಜನರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಇದೀಗ 130 ಜನರನ್ನು ಹೊಸದಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಅಬ್ಬರ ಜೋರಾಗಿರುವುದರಿಂದ ಶುಕ್ರವಾರ ಮಸೀದಿಗಳಲ್ಲಿ ನಡೆಯುತ್ತಿದ್ದ ಪ್ರಾರ್ಥನೆಗಳನ್ನು ರದ್ದುಪಡಿಸಿ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೋಯಿಕ್ಕೋಡ್ ಜನತೆಗೆ ನಿಫಾ ವೈರಸ್ ಮತ್ತೊಮ್ಮೆ ಕೊರೊನಾವನ್ನು ನೆನಪಿಸುವಂತಿದೆ.