ಪತಿ-ಪತ್ನಿಯರ ಜಗಳದಲ್ಲಿ, ಕ್ಷುಲ್ಲಕ ವಿಚಾರಕ್ಕೂ, 504 ಅಥವಾ 506 ಅಡಿ ಕೇಸ್ ದಾಖಲಿಸುವುದು ತಮಾಷೆಯ ವಿಚಾರ ಅಲ್ಲ: ಕರ್ನಾಟಕ ಹೈಕೋರ್ಟ್

ರಾಜ್ಯ

ಪತಿ-ಪತ್ನಿಯರ ಜಗಳದಲ್ಲಿ ಮತ್ತು ಕ್ಷುಲ್ಲಕ ವಿಚಾರಗಳಿಗೂ ಐಪಿಸಿ ಸೆಕ್ಷನ್ 504 ಮತ್ತು 506 ಅನ್ವಯಿಸುವುದು ಅಭ್ಯಾಸವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖಾಧಿಕಾರಿಗಳು ಎರಡು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ನಿಬಂಧನೆಗಳನ್ನು ಹಾಕುವಾಗ ಎಚ್ಚರಿಕೆ ವಹಿಸಬೇಕು. ಪತಿ-ಪತ್ನಿಯರ ನಡುವೆ ವಿವಾದವಿದ್ದರೆ ಅದು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತದೆ ಎಂದು ಕಲ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಹೇಳಿದೆ.

ಪತಿ-ಪತ್ನಿಯರ ಕಲಹ ಪ್ರಕರಣದಲ್ಲಿ ಸೆಕ್ಷನ್ 506(ಜೀವ ಬೆದರಿಕೆ) ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಪತಿ-ಪತ್ನಿಯರ ನಡುವೆ ಉಂಟಾದ ಕ್ಷುಲ್ಲಕ ಜಗಳ ಎಂದು ಸತ್ಯಗಳು ಸೂಚಿಸುತ್ತಿವೆ. ಅರ್ಜಿದಾರರ ವಿರುದ್ಧ ಅನಗತ್ಯವಾಗಿ ಸೆಕ್ಷನ್ 506 ಹಾಕಲಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಪತಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ್ದಾರೆ.ಈ ಅಪರಾಧಗಳು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.”ಆದ್ದರಿಂದ, ತನಿಖಾಧಿಕಾರಿಯು ಕೇವಲ ಸೆಕ್ಷನ್ 504 ಅಥವಾ 506 ಅಡಿ ಕೇಸ್ ದಾಖಲಿಸುವುದು ತಮಾಷೆಯ ವಿಚಾರ ಅಲ್ಲ” ಎಂದು ಕೋರ್ಟ್ ಹೇಳಿದೆ