ಮಂಗಳೂರು:ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಚಂದ್ರ ಕೆ.ವಿಧಿವಶ

ಕರಾವಳಿ

ಕದ್ರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿದ್ದುಕೊಂಡು, ಜಿಲ್ಲೆಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಕಾಸರಗೋಡು ಅಡೂರು ನಿವಾಸಿ ಚಂದ್ರ ಕೆ ತೀವ್ರ ಅನಾರೋಗ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು ಸದ್ಯದಲ್ಲೇ ಎಎಸ್ ಐ ಹುದ್ದೆಗೆ ಭಡ್ತಿಯಾಗುವವರಿದ್ದರು. ಸಿಸಿಬಿ, ಪಾಂಡೇಶ್ವರ,ಸಿಸಿಆರ್ ಬಿ, ಡಿಸಿಐಬಿ, ಸೆನ್, ಕದ್ರಿ ಠಾಣೆ ಹಾಗೂ ಪ್ರಸ್ತುತ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದೆರಡು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಚಂದ್ರ ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು. ಕ್ರಿಮಿನಲ್ ಲೋಕದ ಬಗ್ಗೆ ಅಪಾರ ಜ್ಞಾನವುಳ್ಳ ನಿಪುಣತೆಯನ್ನು ಹೊಂದಿದ್ದರು.