ಕೂಳೂರು ಇಬ್ರಾಹೀಂ ರವರ ಪುತ್ರರಾಗಿರುವ ನಿಯಾಝ್ ಕೂಳೂರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಸಮಾಜಮುಖಿ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಇವರು ಮಸೀದಿ ಕೆಲಸ ಕಾರ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಮಾತ್ರವಲ್ಲ ತಮ್ಮ ಬಳಿಗೆ ಬಂದವರಿಗೆ ಖಾಲಿ ಕೈಯಿಂದ ಕಲಿಸುತ್ತಿರಲಿಲ್ಲ. ಕೊಡುಗೈ ದಾನಿಯಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಜನಾನುರಾಯಿಯಾಗಿದ್ದರು. ಇಂದು ತೀವ್ರ ಹೃದಯಾಘಾತದಿಂದ ಸ್ವಗೃಹದಲ್ಲಿ ವಿಧಿವಶರಾದರು. ಮೃತರ ದಫನ ಕಾರ್ಯ ಪಂಜಿಮೊಗರು ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿರುವುದು.
