ಆರೋಪಿ ಅಲಗಪ್ಪನ್ ಪರ ಬಿಜೆಪಿ ಪಕ್ಷದ ಹಿರಿಯ ನಾಯಕರು; ನಟಿ ಗೌತಮಿ ಪಕ್ಷ ತೊರೆಯುವ ನಿರ್ಧಾರ

ರಾಷ್ಟ್ರೀಯ

ತಮಿಳುನಾಡಿನ ಬಿಜೆಪಿ ನಾಯಕಿ, ನಟಿ ಗೌತಮಿ ತಡಿಮಲ್ಲಾ ಅವರು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಕಳೆದ 25 ವರ್ಷಗಳಿಂದ ಪಕ್ಷದ ಕಾರ್ಯಕರ್ತೆಯಾಗಿದ್ದೆ. ಪಕ್ಷದ ಬದ್ಧತೆಗೆ ಒಗ್ಗೂಡಿಕೊಂಡಿದ್ದೆ. ಆದರೆ ನನ್ನ ಆಸ್ತಿ ವಿವಾದದಲ್ಲಿ ವಿರೋಧಿಗಳೊಂದಿಗೆ ನಮ್ಮ ಪಕ್ಷದವರೇ ಕೈಜೋಡಿಸಿ ಕಿರುಕುಳ ನೀಡುತ್ತಿರುವುದಕ್ಕೆ ಬೇಸತ್ತು ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ

ಈ ಕುರಿತು ಟ್ವೀಟ್ ಮಾಡಿರುವ ಗೌತಮಿ, ನನ್ನ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಪಕ್ಷದ ಹಿರಿಯ ನಾಯಕರು ಸಹಾಯ ಮಾಡುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಗೌತಮಿ ತಿಳಿಸಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ನನಗೆ ಸಿ.ಅಲಗಪ್ಪನ್ ಎಂಬುವವರ ಸ್ನೇಹ ಆಗಿತ್ತು. ನಂತರದ ದಿನಗಳಲ್ಲಿ ಅವರಿಗೆ ನಮ್ಮ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು. ಇತ್ತೀಚೆಗೆ ಅವರಿಗೆ ನಮ್ಮ ಜಮೀನನ್ನು ಮಾರಾಟ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಜಮೀನು ಮಾರಾಟದ ಹೆಸರಲ್ಲಿ ನಮಗೆ ಆತ ಮೋಸ ಮಾಡಿದ್ದಾನೆ. ಈ ವಿಚಾರದಲ್ಲಿ ಪಕ್ಷದ ನಾಯಕರು ನನಗೆ ಯಾವುದೇ ಸಹಾಯ ಮಾಡಿಲ್ಲ. ಆರೋಪಿ ಅಲಗಪ್ಪನ್ ಪರ ಪಕ್ಷದ ಹಿರಿಯ ನಾಯಕರು ನಿಂತಿದ್ದಾರೆ ಎಂದು ಗೌತಮಿ ಆರೋಪಿಸಿದ್ದಾರೆ