ಲೋಕಸಭಾ ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ರಾಜ್ಯದ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿರುವ ಮಾಹಿತಿ ಹೊರಬಿದ್ದಿದೆ. ಯಡಿಯೂರಪ್ಪ ಬಣ ರೆಡಿ ಮಾಡಿರುವ ಪಟ್ಟಿ ಬುಧವಾರ ದೆಹಲಿ ಹೈಕಮಂಡ್ ಅಂಗಳಕ್ಕೆ ಹೋಗಲಿದ್ದು ಶುಕ್ರವಾರದೊಳಗೆ ಫೈನಲಾಗುವ ಸಾಧ್ಯತೆ ಇದೆ ಎಂದ ಮೂಲಗಳಿಂದ ತಿಳಿದು ಬಂದಿದೆ.
ಸರಿ-ಸುಮಾರು 14 ಲೋಕಸಭಾ ಕ್ಷೇತ್ರದ ಪಟ್ಟಿ ರೆಡಿಯಾಗಿದ್ದು, ಉಳಿದ ಪಟ್ಟಿಯಲ್ಲಿ ಜೆಡಿಎಸ್ ಪಾಲು ಎಷ್ಟಿರಬಹುದೆಂದು ಸ್ಪಷ್ಟವಾಗಲಿದೆಂಬ ಮಾಹಿತಿ ಜೆಡಿಎಸ್ ಮೂಲದಿಂದ ಸ್ಪೋಟಗೊಂಡಿದೆ. ದೆಹಲಿ ಅಂಗಳದಲ್ಲಿ ರಾಜ್ಯ ರೆಡಿ ಮಾಡಿರುವ ಪಟ್ಟಿಯ ಬದಲಾವಣೆ, ಸೇರ್ಪಡೆ ಆಗುವ ಸಾಧ್ಯತೆಯಿದೆ.
ಕಾಂಗ್ರೇಸ್ ಫೆಬ್ರವರಿ ಅಂತ್ಯದಲ್ಲಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಸಾದ್ಯತೆ ಹೆಚ್ಚಿದೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಸೇರಿದಂತೆ ಒಟ್ಟು 14 ಕ್ಷೇತ್ರಗಳು ಬಾಕಿ ಉಳಿದಂತಾಗಿದೆ. ಗೊಂದಲವಿಲ್ಲದ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಇದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ..
