ಬಂಡಾಯ ಸಾರಿದ ಈಶ್ವರಪ್ಪರ ಕೋಪ ಶಮನವಾಯಿತೇ.! ಶಾ ನೀಡಿದ ಭರವಸೆಯ ಮಹಾಪೂರ ಯಾವುದು.?

ರಾಜ್ಯ

ಹಾವೇರಿ ಕ್ಷೇತ್ರದಿಂದ ಈಶ್ವರಪ್ಪ ಮಗನಿಗೆ ಟಿಕೆಟ್ ಬೇಕೆಂದು‌ ಮೊದಲೇ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಾವೇರಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದೆ. ಇದರಿಂದ ಕೋಪಗೊಂಡಿದ್ದ ಈಶ್ವರಪ್ಪ ಬಂಡಾಯ ಸಾರಿದ್ದರು. ಶಿವಮೊಗ್ಗದಲ್ಲಿಯೇ ನನ್ನ ಮಗನನ್ನು ನಿಲ್ಲಿಸುತ್ತೇನೆ ಎಂದಿದ್ದರು. ಇದೀಗ ಅವರ ಕೋಪ ಶಮನವಾಗಿದ್ದು, ಬಿಎಸ್ವೈ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸುವ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈಶ್ವರಪ್ಪ ಅವರ ಕೋಪವನ್ನು ತಣಿಸಿದ್ದಾರೆ ಎನ್ನಲಾಗಿದೆ. ಅಮಿತ್ ಶಾ ಅವರು ನಿಮ್ನೆ ರಾತ್ರಿಯೇ ರಾಜ್ಯಕ್ಕೆ ಆಗಮಿಸಿದ್ದು, ಎಲ್ಲಾ ಲೋಕಸಭಾ ಕ್ಷೇತ್ರಗಳ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಇದೇ ವೇಳೆ ಈಶ್ವರಪ್ಪ ಅವರಿಗೂ ಕರೆ ಮಾಡಿ, ಹತ್ತು ನಿಮಿಷಗಳ ಕಾಲ ಮಾತನಾಡಿದ್ದಾರೆ. ಈಶ್ವರಪ್ಪ ಅವರ ಮನವೊಲಿಸುವಂತ ಭರವಸೆಗಳ ಮಹಾಪೂರವನ್ನೇ ನೀಡಿದ್ದಾರಂತೆ. ಈ ಭರವಸೆಗಳನ್ನು ರಿಸೀವ್ ಮಾಡಿಕೊಂಡಿರುವ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸದೆ, ಬಿವೈ ರಾಘವೇಂದ್ರ ಅವರಿಗೆ ಬೆಂಬಲ ನೀಡುತ್ತಾರೆ ಎನ್ನಲಾಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಈ ಸಂಬಂಧ ಮಾಹಿತಿ ನೀಡಲಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಸ್ವತಂತ್ರ ಸ್ಪರ್ಧೆ ಮಾಡುತ್ತಾರಾ ಅಥವಾ ಬೆಂಬಲ ನೀಡುತ್ತಾರಾ ನೋಡಬೇಕಿದೆ. ಯಾಕಂದ್ರೆ ಅಮಿತ್ ಶಾ ಅವರು ಕರೆ ಮಾಡಿದ್ದಾರೆ‌ ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾನೇ ಈಶ್ವರಪ್ಪ ಅವರು ಹೇಳಿದ್ದಾರೆ. ಹೀಗಾಗಿ ಸುದ್ದಿಗೋಷ್ಟಿಯ ನಂತರ ವಿಚಾರ ತಿಳಿಯಲಿದೆ.

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ. ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಬಂಡಾಯದ ಬಿಸಿ ಪಕ್ಷಕ್ಕೆ ತಟ್ಟಿದೆ. ಹಾಲಿ ಸಂಸದರುಗಳು ಟಿಕೆಟ್ ಮಿಸ್ ಆಗಿದೆ ಎಂದು ಬೊಬ್ಬೆ ಹೊಡೆಯಲು ಆರಂಭಿಸಿದ್ದು, ಕೆಲ ನಿಷ್ಠಾವಂತ ಕಾರ್ಯಕರ್ತರು ಕೂಡ ಪಕ್ಷ ತ್ಯಜಿಸುವತ್ತ ನಿಗಾವಹಿಸಿದ್ದಾರೆ. ಇದರ ಜೊತೆಗೆ ಕ್ಷೇತ್ರಗಳ ಮೇಲೆ ಈವರೆಗೂ ಅಭ್ಯರ್ಥಿಗಳು ಹಿಡಿತ ಸಾಧಿಸದೇ ಹೋಗಿರುವುದು‌. ಪ್ರಚಾರಕ್ಕೆಂದು ಹೋದಾಗ ಟಿಕೆಟ್ ಆಕಾಂಕ್ಷಿಗಳು ಅಥವಾ ಹಾಲಿ ಸಂಸದರುಗಳು ಅಭ್ಯರ್ಥಿಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡದೇ ಇರುವುದು‌. ನಮ್ಮ ಅಭ್ಯರ್ಥಿಗಳ ಗೆಲುವಿನ ಓಟಕ್ಕೆ ನಮ್ಮವರೇ ಅಡ್ಡಗಾಲು ಹಾಕುತ್ತಿರುವ ವಿಚಾರವನ್ನು ಚರ್ಚೆ ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.

ಇತ್ತ ಚಿಕ್ಕಬಳ್ಳಾಪುರದಿಂದ ಸುಧಾಕರ್‌ಗೆ, ತುಮಕೂರಿನಲ್ಲಿ ಅಭ್ಯರ್ಥಿ ವಿ. ಸೋಮಣ್ಣರಿಗೆ, ಚಿತ್ರದುರ್ಗದಲ್ಲಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಗೋಬ್ಯಾಕ್ ಅಭಿಯಾನ, ದಾವಣಗೆರೆಯಲ್ಲಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ಗೆ ಸ್ಥಳೀಯ ಬಿಜೆಪಿ ನಾಯಕರಿಂದ ಒಳಪೆಟ್ಟಿನ ಆತಂಕ. ಹೀಗೆ ನಾಲ್ಕು ಕಠಿಣವಾದ ಕ್ಷೇತ್ರಗಳ ನಾಯಕರನ್ನು ಕರೆಸಿ, ಅಮಿತ್ ಶಾ ಸಭೆ ನಡೆಸಿದ್ದಾರೆ ಎನ್ನಲಾಗಿದೆ.