ದೇಶಾದ್ಯಂತ ಸಿಡಿದೆದ್ದ ಮಹಿಳೆಯರು; ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ.
ಲೋಕಸಭೆ ಚುನಾವಣೆಯ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಿದ್ದಾರೆ. ಆತುರದ ಹೇಳಿಕೆಯಿಂದ ಗೌರವ ಕಳೆದುಕೊಂಡರೇ ಮೋದಿ.?ದೇಶಾದ್ಯಂತ ಮಹಿಳೆಯರು ಸಿಡಿದೆದ್ದಿದ್ದಾರೆ, ಪ್ರಧಾನಿ ಹೇಳಿಕೆಯ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಂಗಳಸೂತ್ರ ಎಂಬುದು ಮಹಿಳೆಯರ ಭಾವನಾತ್ಮಕ ವಿಚಾರ. ಯಾವ ವಿಚಾರವನ್ನು ಸಹಿಸಿದರೂ ಮಾಂಗಲ್ಯ ವಿಚಾರವನ್ನು ಯಾವ ಮಹಿಳೆಯೂ ಸಹಿಸಲಾರಳು. ಮಂಗಳಸೂತ್ರ ಜಾರಿಬಿದ್ದರೆ ಸಾಕು, ತುಂಡಾದರೆ ಸಾಕು ಮಹಿಳೆ ನೊಂದುಕೊಳ್ಳುತ್ತಾಳೆ, ಸಹಿಸಲಾಗದ ವೇದನೆಯಿಂದ ಆಕೆ ಬಳಲುತ್ತಾಳೆ. ಆದರೆ ಇದೀಗ, ದೇಶದ ದೊರೆಯೇ ‘ಮಂಗಳಸೂತ್ರ ಕಸಿದುಕೊಳ್ಳುತ್ತಾರೆ’ ಎಂದು ಬೆದರಿಸಿದ್ದಾರೆ. ಕಾಂಗ್ರೆಸ್ ವಿರುದ್ದ ಇಂಥದ್ದೊಂದು ಆರೋಪ ಮಾಡಿದ್ದಾರೆ. ಹೆಣ್ಮಕ್ಕಳನ್ನು, ‘ಅವ್ವ’, ‘ಅಮ್ಮ’ ಎಂದು ಕರೆಸಿಕೊಳ್ಳುವ ಸಂಸ್ಕಾರ ನಮ್ಮದು. ಅಂಥ ಹೆಣ್ಮಕ್ಕಳನ್ನು ವಿಧವೆಯನ್ನಾಗಿ ನೋಡಲು ಯಾರೂ ಒಪ್ಪೊಲ್ಲ. ‘ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ‘ಕೈಗೆ ಬಳೆ’ ಬಗ್ಗೆ ನಟರೊಬ್ಬರು ಹೇಳಿದ್ದ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತೆಯರ ರಕ್ಷಣೆಯ ಬಗ್ಗೆ ಪುಂಗಿ ಊದುವ ದೇಶದ ಪ್ರದಾನಿ ಮೋದಿ ಅವರೇ ‘ಮಂಗಳಸೂತ್ರದ’ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಮಹಿಳೆಯರನ್ನು ಅಪಮಾನಿಸಿದ್ದಾರೆ.

ಸನಾತನ ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ಬಹಳ ಮಹತ್ವವಿದೆ. ವೇದ ಮಂತ್ರಗಳ ಮತ್ತು ಹಿರಿಯರ ಆಶೀರ್ವಾದದೊಂದಿಗೆ, ವರನು ವಧುವಿನ ಕೊರಳಿಗೆ ಪವಿತ್ರ ಮಂಗಳಸೂತ್ರವನ್ನು ಕಟ್ಟುತ್ತಾನೆ. ಮದುವೆಯ ಸಮಯದಲ್ಲಿ, ವಧುವಿನ ಕುತ್ತಿಗೆಗೆ ಮೂರು ಗಂಟು ಹಾಕಲಾಗುತ್ತದೆ ಮತ್ತು ವರನು ವಧುವಿನ ಕೈಗಳನ್ನು ಹಿಡಿಯುತ್ತಾನೆ. ಗಂಡ ಬದುಕಿರುವವರೆಗೆ ಮಹಿಳೆಯ ಮಂಗಳಸೂತ್ರವನ್ನು ಆಕೆಯ ಕುತ್ತಿಗೆಯಿಂದ ತೆಗೆಯಬಾರದು. ಮಹಿಳೆಯರು ಮಂಗಳಸೂತ್ರವನ್ನು ಗಂಡನ ಸಾಕಾರವೆಂದು ಪರಿಗಣಿಸುತ್ತಾರೆ. ಪ್ರತಿದಿನ ಪೂಜೆಯ ನಂತರ ಮಂಗಳಸೂತ್ರಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆ. ಪತಿ ಆರೋಗ್ಯವಾಗಿ ಮತ್ತು ಸಂತೋಷದಿಂದ ಬದುಕಲಿ ಎಂದು ಮಂಗಳಸೂತ್ರವನ್ನು ಕಣ್ಣುಗಳಿಗೆ ಒತ್ತಿಕೊಂಡು ಬೇಡಿಕೊಳ್ಳಲಾಗುತ್ತದೆ.
ಭಾರತೀಯ ಮಹಿಳೆಯರು ಮಂಗಳಸೂತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರವು ಎರಡು ಪದಗಳ ಸಂಯೋಜನೆಯಾಗಿದೆ. ಮಂಗಳ ಎಂದರೆ ಒಳ್ಳೆಯದು, ಸೂತ್ರ ಎಂದರೆ ದಾರ. ಮದುವೆಯ ವಿಧಿ ವಿಧಾನಗಳ ನಂತರ ಪವಿತ್ರ ದಾರವನ್ನು ಕುತ್ತಿಗೆಗೆ ಕಟ್ಟಲಾಗುತ್ತದೆ. ಇದು ಪತಿ-ಪತ್ನಿಯರ ನಡುವಿನ ಶಾಶ್ವತ ಬಾಂಧವ್ಯದ ಆರಂಭ. ಪ್ರೀತಿ, ವಾತ್ಸಲ್ಯ, ವಿಶ್ವಾಸ ಮತ್ತು ಜವಾಬ್ದಾರಿಯ ಸಂಕೇತವಾಗಿ, ಪತಿ ಬದುಕಿರುವವರೆಗೂ ಹೆಂಡತಿ ಮಂಗಳಸೂತ್ರವನ್ನು ಧರಿಸುತ್ತಾಳೆ.

ಮಂಗಳಸೂತ್ರದಿಂದಾಗಿ ಮಹಿಳೆಯು ಧರ್ಮ, ಕರ್ತವ್ಯ ಮತ್ತು ನಿಯಮಗಳ ಬಗ್ಗೆ ಜಾಗೃತಳಾಗಿದ್ದಾಳೆ. ವಿವಾಹಿತ ಮಹಿಳೆಗೆ ಮಂಗಳಸೂತ್ರವನ್ನು ಧರಿಸುವುದು ಒಂದು ಪ್ರಮುಖ ನಡವಳಿಕೆಯಾಗಿದೆ. ಇದನ್ನು ಮಹಿಳೆಯರಿಗೆ ನೀತಿ ಸಂಹಿತೆ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಮಹಿಳೆಯು ಅಸಂಬದ್ಧ ನಡವಳಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಆಕೆಯ ನಡವಳಿಕೆಯು ಆದರ್ಶಪ್ರಾಯವಾಗಿ ಉಳಿಯುತ್ತದೆ. ಮಂಗಳಸೂತ್ರದ ಕಾರಣದಿಂದಾಗಿ ಮಹಿಳೆ ಮತ್ತು ಇತರರು ತನ್ನ ವಿವಾಹಿತ ಸ್ಥಿತಿಯ ಬಗ್ಗೆ ಜಾಗೃತರಾಗಿದ್ದಾರೆ. ಮಂಗಳಸೂತ್ರವು ವೈವಾಹಿಕ ಬಂಧನವಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ಮಹಿಳೆ ಈ ಪವಿತ್ರ ಬಂಧನವನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಅವಳ ಕಡೆಯಿಂದ ಯಾವುದೇ ಅನೈತಿಕ ನಡವಳಿಕೆ ಇರಬಾರದು. ಮಂಗಳಸೂತ್ರವನ್ನು ಧರಿಸಿದ ಮಹಿಳೆ ವಿವಾಹಿತ ಮಹಿಳೆ ಎಂದು ಇತರರು ತಿಳಿದಿರಬೇಕು ಮತ್ತು ಅವಳನ್ನು ಸರಿಯಾಗಿ ಗೌರವಿಸಬೇಕು ಎಂಬುದು ಮಂಗಳಸೂತ್ರದ ಉದ್ದೇಶವಾಗಿದೆ.
ಮಂಗಳಸೂತ್ರದಿಂದಾಗಿ ಶಿವನ ರೂಪದಲ್ಲಿರುವ ಗಂಡನ ಪ್ರಜ್ಞೆಯು ಮಹಿಳೆಯಲ್ಲಿ ನಿರಂತರವಾಗಿ ಜಾಗೃತವಾಗಿರುತ್ತದೆ.
ಮಂಗಳಸೂತ್ರವು ಶಿವ ಮತ್ತು ಶಕ್ತಿಯ ಸಂಕೇತವಾಗಿದೆ. ಮಂಗಳಸೂತ್ರದ ಮೂಲಕ ಮಹಿಳೆ ಆಸೆ, ಕ್ರಿಯೆ ಮತ್ತು ಜ್ಞಾನದ ಶಕ್ತಿಯನ್ನು ಪಡೆಯುತ್ತಾಳೆ. ಮಂಗಳಸೂತ್ರವು ಮಹಿಳೆಗೆ ಒಂದು ಕಾರ್ಯವನ್ನು ನಿರ್ವಹಿಸಲು ಸಂಪೂರ್ಣ ಅಗ್ನಿ ಅಂಶದ (ತೇಜ್) ರೂಪದಲ್ಲಿ ಶಕ್ತಿಯನ್ನು ಒದಗಿಸುವ ಕೊಂಡಿಯಾಗಿದೆ. ಆದರೆ ಆ ಪಾವಿತ್ರತೆಯ ಸಂಕೇತವಾದ ಮಂಗಳ ಸೂತ್ರವನ್ನು ಇಂದು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಯ ಓಟ್ ಬ್ಯಾಂಕಿಗೆ ಬಳಸುತ್ತಿರುವುದು ಮಾತ್ರ ಖೇಧಕರ. ಇದು ಸಮಾಜಕ್ಕೆ ಯಾವ ತಪ್ಪು ಮಾಹಿತಿಯನ್ನು ತಲುಪಿಸುತ್ತದೆ ಎಂಬ ಅಲ್ಪ ಜ್ಞಾನವು ಇಲ್ಲದಂತಾಗಿದೆ ಈಗಿನ ರಾಜಕರಣಿಗಳಿಗೆ ಇದು ದೊಡ್ಡ ದುರಂತವೇ ಸರಿ.!
