ವಿಟ್ಲ : ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕೈಚಳಕ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಸಮೇತ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು.

ಎ.ಸಿ.ಚಾಲು ಮಾಡಿಯೇ ಆರಾಮವಾಗಿ ನಾಲ್ಕು ಕಪಾಟುಗಳನ್ನು ಒಡೆದ ಕಳ್ಳರು ಸೊತ್ತುಗಳಿಗಾಗಿ ಗಂಟೆಗಳ ಕಾಲ ಸಾಕಷ್ಟು ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ Rado ವಾಚ್ ಮಾತ್ರ ಕಳ್ಳರ ಪಾಲಾಗಿದೆ. ಮಾಲಿಕ ಖಲೀಲ್ ಕುಟುಂಬ ವಿದೇಶದಲ್ಲಿರುವ ಕಾರಣ ಅದೃಷ್ಟವಶಾತ್ ಚಿನ್ನಾಭರಣಗಳೆಲ್ಲವೂ ಸೇಫಾಗಿದೆ. ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
