ನಕಲಿ ದಾಖಲೆ ಸೃಷ್ಟಿ, ವಂಚನೆ, ದಾಖಲೆ ತಿದ್ದುವ ಮೂಲಕ ಜನಸಾಮಾನ್ಯರನ್ನು ವಂಚಿಸುವ ಅಕ್ರಮಗಳಿಗೆ ಕಡಿವಾಣ

ರಾಜ್ಯ

ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡಿದ ಸರಕಾರ

ಇನ್ಮು ಮುಂದಕ್ಕೆ ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳು ಆನ್ ಲೈನ್ ನಲ್ಲಿ ಸಿಗಲಿದ್ದು, ಇದರಿಂದಾಗಿ ನಕಲಿ ದಾಖಲೆ ಸೃಷ್ಟಿ ವಂಚನೆಗೆ ಸಂಪೂರ್ಣ ಕಡಿವಾಣ ಬೀಳಲಿದೆ. ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ಪಡೆದುಕೊಂಡಿದ್ದು, ನಕಲಿ ದಾಖಲೆ ಸೃಷ್ಟಿ ಮತ್ತು ದಾಖಲೆ ತಿದ್ದುವ ಮೂಲಕ ಜನಸಾಮಾನ್ಯರನ್ನು ವಂಚಿಸುವ ಅಕ್ರಮಗಳಿಗೆ ಕಡಿವಾಣ ಹಾಕಲು, ಕಂದಾಯ ದಾಖಲೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ಭೂ ದಾಖಲೆ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದೆ.

ತಾಲೂಕು ಮಟ್ಟದ ಎ.ಡಿ.ಎಲ್.ಆರ್. ಕಚೇರಿಗಳಲ್ಲಿರುವ ಎಲ್ಲಾ ರೆಕಾರ್ಡ್ ರೂಂಗಳನ್ನು ಡಿಜಿಟಲೈಸ್ ಮಾಡಿ ಭೂ ದಾಖಲೆಗಳೊಂದಿಗೆ ಸಂಬಂಧಿಸಿದ ಮಾಲೀಕರ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. 2012 ರಿಂದ 21ರ ವರೆಗೆ ನೋಂದಣಿಯಾದ ಸುಮಾರು ಎರಡು ಕೋಟಿ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. 2025 ರ ಒಳಗೆ ರಾಜ್ಯದ ಎಲ್ಲಾ ತಾಲೂಕು ಕಚೇರಿಗಳನ್ನು ಕಾಗದ ರಹಿತ ಮಾಡುವ ಗುರಿ ಹೊಂದಲಾಗಿದೆ