ಮಂಜೇಶ್ವರದ ಮೊಹಮ್ಮದ್ ಶಿಹಾಬ್, ಗಂಜಿಮಠ ನಿವಾಸಿಗಳಾದ ಮೊಹಮ್ಮದ್ ಸಫಾನ್ ಹಾಗೂ ಮೊಹಮ್ಮದ್ ಅರ್ಫಾಸ್
ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಮಂಗಳೂರು ನಗರದ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜೇಶ್ವರ ನಿವಾಸಿ ಮೊಹಮ್ಮದ್ ಶಿಹಾಬ್, ಮಂಗಳೂರು ತಾಲೂಕು ಗಂಜಿಮಠ ನಿವಾಸಿಗಳಾದ ಮೊಹಮ್ಮದ್ ಸಫಾನ್ ಹಾಗೂ ಮೊಹಮ್ಮದ್ ಅರ್ಫಾಸ್ ಎಂಬವರನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡು ಸೋಂಕಾಲ್ ಸುಭಾಶ್ ನಗರದ ಆಯಿಶಾ ಯೂಸಫ್ ಅವರ ಮನೆಯಿಂದ 2024ರ ಜೂ. 4ರಂದು 1.20 ಲಕ್ಷ ರೂ. ಮೌಲ್ಯದ ಐಫೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಇವರನ್ನು ಕುಂಬಳೆ ಪೊಲೀಸರು ವಿಚಾರಣೆ ನಡೆಸಲು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂದ್ಯೋಡು ಅಡ್ಕದ ಅಶ್ರಫ್ ಅಲಿಯನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಪೊಲೀಸ್ ವಶದಲ್ಲಿರುವ ಆರೋಪಿಗಳು ಮಂಜೇಶ್ವರ, ಕಾಸರಗೋಡು ಹಾಗೂ ಕರ್ನಾಟಕದ ವಿವಿದೆಡೆ ನಡೆದ ಕಳವು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
