ಕೋವಿಡ್ ಸಾಂಕ್ರಾಮಿಕಕ್ಕೆ ಭಾರತದಲ್ಲಿ 11.9 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ಆಕ್ಸ್ ಫರ್ಡ್, ಸಿಟಿ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನ ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಕೇಂದ್ರ ಸರಕಾರ ಅಧಿಕೃತ ಲೆಕ್ಕಕ್ಕಿಂತ ಎಂಟು ಪಟ್ಟು ಅಧಿಕ.!
ಅಮೆರಿಕದ ನ್ಯೂಯಾರ್ಕ್ ಆಕ್ಸ್ ಫರ್ಡ್ ಹಾಗೂ ನ್ಯೂಯಾರ್ಕ್ ಸಿಟಿ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸಿದ ಸಂಶೋಧನಾ ವರದಿಯು, ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದ ಮೊದಲ ವರ್ಷದಲ್ಲಿ ಭಾರತದಲ್ಲಿ ಮುಸ್ಲಿಮರು, ಆದಿವಾಸಿಗಳು, ದಲಿತರು, ಸಮಾಜದ ಶೋಷಿತ ವರ್ಗ, ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೋವಿಡ್ ಸಂಕ್ರಮಣ ಕಾಲದಲ್ಲಿ ವಯಸ್ಸು, ಲಿಂಗ ಮತ್ತು ಸಮಾಜದ ವಿವಿಧ ವರ್ಗಗಳ ಜನರ ಮೇಲೆ ಸೋಂಕು ಯಾವ ರೀತಿ ಪರಿಣಾಮ ಬೀರಿದೆ ಎಂಬ ಬಗ್ಗೆ ವರದಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಕೋವಿಡ್ ಸೋಂಕಿನಿಂದ ಭಾರತದಲ್ಲಿ 8 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ಕೇಂದ್ರ ಸರಕಾರದ ವರದಿ ಪ್ರಕಾರ ಮೃತಪಟ್ಟವರ ಸಂಖ್ಯೆ 1.50 ಲಕ್ಷ ಎಂದು ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದ ಸಾವಿನ ಸಂಖ್ಯೆಗಿಂತ ಒಂದೂವರೆ ಪಟ್ಟು ಅಧಿಕ ಸಾವು ಸಂಭವಿಸಿದೆ ಎಂದು ಅಮೆರಿಕ ವಿವಿಗಳ ಅಧ್ಯಯನ ವರದಿ ಹೇಳಿದೆ.
