ಪೊಲೀಸ್ ಅಧಿಕಾರಿಗಳ ವರ್ಗಾವಣೆ ಅವಧಿ ಎರಡು ವರ್ಷಕ್ಕೊಮ್ಮೆ: ರಾಜ್ಯ ಸರ್ಕಾರ

ರಾಜ್ಯ

ರಾಜ್ಯದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟ ಆದೇಶ ಹೊರಡಿಸಿದ ದಿನದಿಂದ ಅನ್ವಯ ಆಗಲಿದೆ.

ರಾಜ್ಯದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟ ಆದೇಶ ಹೊರಡಿಸಿದ ದಿನದಿಂದ ಅನ್ವಯ ಆಗಲಿದೆ. ಹಿಂದಿನ ಆದೇಶಗಳಿಗೆ ಅನ್ವಯ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆ ಅವಧಿ ಎರಡು ವರ್ಷಕ್ಕೊಮ್ಮೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಈ ಆದೇಶ ಹಿಂದಿನ ಆದೇಶಕ್ಕೆ ಅನ್ವಯ ಆಗುತ್ತಾ ಅಥವಾ ಮುಂದಿನ ಆದೇಶಕ್ಕಾ ಎಂಬ ಅರ್ಜಿಯ ವಿಚಾರಣೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ವಿಚಾರಣೆಗೆ ಬಂದಿತ್ತು. 20ಕ್ಕೂ ಅಧಿಕ ಅರ್ಜಿದಾರರ ಪರವಾಗಿ ವಕೀಲರು ಹಾಜರಾಗಿ ವಾದ ಮಂಡಿಸಿದರು. ಇದೇ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಎಜಿ ಶಶಿ ಕಿರಣ್ ಶೆಟ್ಟಿ ಅವರು, ಕಾನೂನು ಜಾರಿಗೆ ಬಂದಿರುವುದು ಒಳ್ಳೆಯ ಉದ್ದೇಶದಿಂದ. ಈ ಕಾನೂನು ಜಾರಿಗೆ ಬಂದಾಗಿನಿಂದ ಮಾಡಿದ ಎಲ್ಲ ವರ್ಗಾವಣೆ ಆದೇಶಗಳಿಗೆ ಅನ್ವಯ ಆಗುತ್ತದೆ. ಒಂದು ವೇಳೆ ಈ ಕಾನೂನು ಹಿಂದಿನ ಆದೇಶಗಳಿಗೂ ಅನ್ವಯವಾಗಬೇಕ್ಕಿದ್ದರೇ ಆದೇಶದಲ್ಲಿಯೇ ಉಲ್ಲೇಖ ಮಾಡಲಾಗುತ್ತಿತ್ತು. ಈ ಬಗ್ಗೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಉಲ್ಲೇಖ ಮಾಡಿದರು.

ಇದಕ್ಕೆ ತೃಪ್ತಿ ವ್ಯಕ್ತಿಪಡಿಸಿದ ಕೆಎಟಿ, ಅರ್ಜಿದಾರರಿಗೆ ಅರ್ಜಿಯನ್ನು ಹಿಂಪಡೆಯುವಂತೆ ಸಲಹೆ ನೀಡಿದರು. ಇಲ್ಲವಾದರೆ ವಜಾ ಮಾಡುವುದಾಗಿ ಸಹ ತಿಳಿಸಿದರು. ಜುಲೈ 31ರಿಂದ ವರ್ಗಾವಣೆ ಮಾಡಬಹುದು ಎಂದು ಸೂಚಿಸಿತು. ಅಲ್ಲದೆ, ಅರ್ಜಿದಾರರಿಗೆ ವೈಯಕ್ತಿಕ ತೊಂದರೆ ಇದ್ದರೇ ಪೀಠಕ್ಕೆ ತಿಳಿಸುವಂತೆ ಜು.31ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿತು.