ಸಾಫ್ಟ್ ವೇರ್ ಉದ್ಯೋಗಿಗೆ ದೋಷ ನೆಪ, ಪ್ರಸಿದ್ದ ದೇವಾಲಯದ ಪೂಜಾರಿಯಿಂದ ಅತ್ಯಾಚಾರ

ರಾಜ್ಯ

ಸಾಫ್ಟ್ ವೇರ್ ಉದ್ಯೋಗಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಹಿನ್ನಲೆಯಲ್ಲಿ ಹಾಸನದ ಪ್ರಸಿದ್ಧ ಪುರದಮ್ಮ ದೇವಾಲಯದ ಪೂಜಾರಿಯನ್ನು ಬಾಗಲುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ ದಯಾನಂದನೇ ಬಂಧಿತ ಆರೋಪಿ.

ಮಹಿಳೆ ನೀಡಿದ ದೂರಿನ ಅನ್ವಯ ಬಾಗಲುಗುಂಟೆ ಠಾಣೆಯಲ್ಲಿ ಆತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿ ದೇವಸ್ಥಾನದ ಪೂಜಾರಿ ದಯಾನಂದ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಪೂಜಾರಿ, ಬಳಿಕ ಮಹಿಳೆಯನ್ನು ಕರೆಸಿಕೊಂಡು ಆತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ.

ಆರೋಪಿ ದಯಾನಂದ್ ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದಾನೆ. ಮಹಿಳೆ ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಪರಿಚಯ ಮಾಡಿಕೊಂಡಿದ್ದ. ಶಾಸ್ತ್ರ ಹೇಳುತ್ತಿದ್ದ ಪೂಜಾರಿ ದಯಾನಂದ್‌ಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಮಹಿಳೆಗೆ ಕಂಟಕವಿದೆ‌ ಹೇಳಿ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಒಂದು‌ ಲಕ್ಷಕ್ಕಿಂತ ಹೆಚ್ಚು ಹಣ ಮಹಿಳೆಯಿಂದ ಪಡೆದಿದ್ದ ಎನ್ನಲಾಗಿದೆ. ದೂರದಾರೆ ಪ್ರತಿಷ್ಠಿತ ಕಂಪೆನಿಯ ಸಾಪ್ಟ್ ವೇರ್ ಉದ್ಯೋಗಿ. ವಿಷೇಶ ಪೂಜೆ ನೇಪದಲ್ಲಿ ಬೇಟಿಯಾಗಿದ್ದ ದಯಾನಂದ ಉಪ್ಪಾರಪೇಟೆ ವ್ಯಾಪ್ತಿಯ ಲಾಡ್ಜ್ ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಖಾಸಗಿ ಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದು, ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.