ಅನ್ಯಾಯಕ್ಕೊಳಗಾದವರ ಪಾಲಿನ ಧ್ವನಿ, ಮಾನವ ಹಕ್ಕುಗಳ ಹೋರಾಟಗಾರ, PUCL ಸಂಘಟನೆಯ ಹಿರಿಯ ಮುಖಂಡ ಪಿ.ಬಿ ಡೇಸಾ ಇನ್ನಿಲ್ಲ

ಕರಾವಳಿ

ಜನಪರವಾದ ಹಿರಿಯ ಕೊಂಡಿಯೊಂದು ನಮ್ಮಿಂದ ಅಗಲಿದೆ. ಪಿ.ಯು.ಸಿ.ಎಲ್ ( ಮಾನವ ಹಕ್ಕುಗಳಿಗಾಗಿ ಜನಪರ ಒಕ್ಕೂಟ) ಇದರ ಹಿರಿಯಾ ಮುಖಂಡ, ನ್ಯಾಯಪರ ಹೋರಾಟಗಾರ ಪಿ.ಬಿ ಡೇಸಾ ಇಂದು ಮುಂಜಾನೆ ನಿಧನರಾಗಿದ್ದಾರೆ.

ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿ, ಕೋಮು ಗಲಭೆ ಹೆಸರಿನಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ಪೊಲೀಸ್ ದೌರ್ಜನ್ಯ, ಶೋಷಿತರಿಗೆ ಆಗುವ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದ ಪಿ.ಬಿ ಡೇಸಾ ರವರ ಹೋರಾಟ ಮೈಲಿಗಲ್ಲನ್ನು ಸೃಷ್ಟಿಸುತ್ತಿತ್ತು. ಸತ್ಯಶೋಧನಾ ವರದಿ, ಮಾನವ ಹಕ್ಕುಗಳ ಹೋರಾಟದ ಮೂಲಕ ಹಲವು ಪೊಲೀಸರ, ಸರಕಾರಿ ಅಧಿಕಾರಿಗಳ ನಿದ್ದೆಯನ್ನು ಕೆಡಿಸಿದ್ದರು.

ಎಂಭತೈದರ ಹರೆಯದಲ್ಲೂ ಯುವಕರಂತೆ ಹೋರಾಟ ರಂಗದಲ್ಲಿ ಮುಂಚೂಣಿಯಲ್ಲಿದ್ದ ಪಿ.ಬಿ ಡೇಸಾರ ನಿಧನ ಅನ್ಯಾಯಕ್ಕೊಳಗಾದವರ ಪಾಲಿನ ಧ್ವನಿಯೊಂದನ್ನು ಕಳೆದುಕೊಂಡಾಂತಾಗಿದೆ.