ಮಂಗಳೂರಿನ ಕೆಲವು ಸ್ವಯಂಘೋಷಿತ ಕಾಕಾ.. ಗಳ ರಂಗೀನ್ ಕಹಾನಿಗಳು..!

ಕರಾವಳಿ

ಇವರದ್ದೇ ಸಂಘಟನೆಗಳು, ಇವರೇ ಪದಾಧಿಕಾರಿಗಳು, ಇವರಿಗೇನೇ ಸನ್ಮಾನ; ಚರಂಡಿ, ಮೋರಿ, ಗಟಾರಕ್ಕೂ ಸೈ, ಒಟ್ಟಾರೆ ಅಧ್ಯಕ್ಷ.

ಇದು ಮಂಗಳೂರಿನ ಕೆಲವು ಶ್ರೀಮಂತ ಕಾ..ಕಗಳ ರಂಗೀನ್ ಕಹಾನಿ. ಹೊರಗಡೆ ತಾವು ಸುಬಗರು, ಸಾತ್ವಿಕರಂತೆ ಕಂಡರೂ ಒಳಗಡೆಯ ಇವರ ಮುಖವಾಡವೇ ಬೇರೆ. ಮಂಗಳೂರಿನಲ್ಲಿ ಕನಿಷ್ಠ ಎಂದರೂ ಕೆಲವು ಸ್ವಯಂಘೋಷಿತ ಅಗರ್ಭ ಶ್ರೀಮಂತರ ಸರ್ಕಲ್ ಇದೆ. ರಾಜಕೀಯ, ಧಾರ್ಮಿಕ ಎಲ್ಲಾ ರಂಗದವರನ್ನು ತನ್ನ ಕೈಯಾರೆ ಕುಣಿಸುವ ಇವರು ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ವಕ್ಫ್, ಹಜ್ಜ್ ,ಅಲ್ಪಸಂಖ್ಯಾತ ಇನ್ನಿತರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಅಧ್ಯಕ್ಷ ಕಂ ಮೆಂಬರ್. ಇವರದ್ದೇ ಕಾರುಬಾರು. ಸರಕಾರ ಅದಲು ಬದಲಾದರೂ ಇವರ ಆಟವೇನು ಕಮ್ಮಿಯಾಗಲ್ಲ. ರಾಜಕೀಯ ಮುಖಂಡರು, ಧಾರ್ಮಿಕ ಪಂಡಿತರು ಇವರೆಲ್ಲ ಇಂತಹವರಿಗೆ ಸೆಲ್ಯೂಟ್ ಹೊಡೆಯುವುದೇ ಜಾಸ್ತಿ. ಕೊಡುಗೈ ದಾನಿ ಎಂಬ ಬಿರುದು ಕೂಡ ಇವರಿಗೇನೇ ಪರ್ಮನೆಂಟ್. ಮಂಗಳೂರಿನ ಎಲ್ಲಾ ಸಂಘಸಂಸ್ಥೆಗಳಲ್ಲಿ ಇವರು ಪದಾಧಿಕಾರಿಯಾಗಿ ಮಿಂಚುತ್ತಾರೆ. ಧಾರ್ಮಿಕ ಸಂಘಟನೆಗಳು ನಡೆಸುವ ಕಾರ್ಯಕ್ರಮಕ್ಕೆ ಕನ್ವೀನರ್, ಗೌರವಾಧ್ಯಕ್ಷ ಅನ್ನುವ ಪೋಸ್ಟ್ ಗಳು ಕೂಡ ಇವರಿಗೆ ಪರ್ಮನೆಂಟ್. ಐವತ್ತು ಸಾವಿರನೋ, ಲಕ್ಷ ಬಿಸಾಡುತ್ತಾರೆ. ಧಾರ್ಮಿಕ ವೇದಿಕೆಗಳಲ್ಲಿ ಸನ್ಮಾನಕ್ಕೂ ಪಾತ್ರರಾಗುತ್ತಾರೆ.

ಇವರ ವಿಚಿತ್ರ ಖಯಾಲಿ ಎಂದರೆ ತಾವೇ ಸಂಘಟನೆ ಹುಟ್ಟು ಹಾಕುವುದು, ಅದರಲ್ಲಿ ಇವರೇ ಪದಾಧಿಕಾರಿ, ಸನ್ಮಾನ ಕೂಡ ಇವರಿಗೇನೇ. ಇವರೇ ಅಧ್ಯಕ್ಷ, ಕಾರ್ಯದರ್ಶಿ ಇವರ ಬಳಗದವರೇ ಸದಸ್ಯರು. ಮಂಗಳೂರಿನಲ್ಲಿ ಇಂತಹ ಹುಚ್ಚುತನದ, ಅಡ್ರೆಸ್ ಇಲ್ಲದ ಸಂಘಟನೆಗಳು ಅನೇಕವಿದೆ. ಸಮಾಜಕ್ಕೆ ಯಾವುದೇ ನಯಾಪೈಸೆಯ ಲಾಭವಿಲ್ಲ. ಆದರೆ ಈ ಕಾ..ಕಾ.. ಗಳಿಗೆ ಸನ್ಮಾನ ಮಾತ್ರ ಖಾಯಂ. ರಂಗು ರಂಗಿನ ಕೋಟು, ಸೂಟು, ಬೂಟು, ತಲೆಯಲ್ಲೊಂದು ಟೋಪ್ಪಿ, ಸೊಂಟದಲ್ಲೊಂದು..! ಹಾಕಿಕೊಂಡು ಬಂದರೆ.. ಅಬ್ಬಬ್ಬಾ ಎಂತಹಾ ಮಾಡೆಲುಗಳು.

ಮತ್ತೊಂದು ವಿಚಾರವೆಂದರೆ ಇವರು ಪಂಚಾತಿಕೆಗೆ ಇಳಿಯುವುದು ಗಂಡ ಹೆಂಡತಿಯ ಪಂಚಾತಿಕೆಗಳಲ್ಲಿ ಇವರೇ ಮುಂದು. ಸಮಾಜದಲ್ಲಿ ಗೌರವವಿದೆ, ಹೆಸರು ಇದೆ ಜೊತೆಗೆ ಶ್ರೀಮಂತರು ಅನ್ನುವ ಕಾರಣಕ್ಕೆ ಕೌಟುಂಬಿಕ ಸಂಬಂಧದ ವ್ಯಾಜ್ಯವನ್ನು ಸರಿಪಡಿಸುವಂತೆ ಇವರ ಬಳಿಗೆ ತೆರಳುತ್ತಾರೆ. ಆದರೆ ಇವರು ಮಾಡುವುದೇ.. ಬೇರೆ. ಗಂಡ ಹೆಂಡತಿಯನ್ನು ಸರಿ ಪಡಿಸುವ ನೆಪ, ಮಾಡುವುದು ಬೇರೇನೇ..! ಇವರ ಸರ್ಕಲ್ ನಲ್ಲಿರುವ ಸ್ವಯಂ ಘೋಷಿತ ಕಾ…ಕಾ ಗಳು ಒಂದಾಗಿ ಮುಕ್ಕುತ್ತಾರೆ. ಕೆಲವು ಮಂದಿ ಕಾಕಾಗಳ ಹಸಿ ಹಸಿ ದೃಶ್ಯಗಳು ಹನಿಟ್ರ್ಯಾಪ್ ಆರೋಪಿಗಳ ಮೊಬೈಲ್ ಭಂಡಾರದಲ್ಲಿ ಭದ್ರವಾಗಿರುವುದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಇದೀಗ ಕಾಕಾಗಳಿಗೆ ಬೆವರಲು ಪ್ರಾರಂಭವಾಗಿದೆಯಂತೆ. ಕೆಲವು ಹೆಣ್ಮಕ್ಕಳು ದಾರಿ ತಪ್ಪಿದ್ದರಲ್ಲಿ ಈ ಕಾಕಾ.. ಗಳ ಪಾತ್ರ ದೊಡ್ಡದು. ಪಾಪ ಹೆಣ್ಮಕ್ಕಳನ್ನು ದೂರಿದರೆ ಸಾಕಾ.? ಇವರು ಕೂಡ ಕಾರಣವಲ್ಲವೇ.?

ಇನ್ನು ಇವರ ಚಟ ಎಂದರೆ ತಮ್ಮ ಸರ್ಕಲ್ ನಲ್ಲಿ ಒಬ್ಬ ಶ್ರೀಮಂತ ಮಿಂಚುತ್ತಿದ್ದರೆ ಆತನನ್ನು ಹೇಗಾದರೂ ಮಾಡಿ ಸೈಡ್ ಲೈನಿಗೆ ಸರಿಸಲು ಕುತಂತ್ರ ಹೆಣೆಯುತ್ತಾರೆ. ಇದಕ್ಕೆ ಜೊತೆಗಿರುವ ಇನ್ನಿತರರು ಕೈ ಜೋಡಿಸುತ್ತಾರೆ. ಇವರ ಸರ್ಕಲ್ ನಲ್ಲಿರುವ ಯಾವುದೇ ಓರ್ವನ ವಿಡಿಯೋ, ಆಡಿಯೋ ಹೊರಬಂದರೆ ಸಾಕು ..ಇವರೇ ಇನ್ನಿತರ ಶ್ರೀಮಂತರಿಗೆ ಫಾರ್ವರ್ಡ್ ಮಾಡಿ ವಿಘ್ನ ಸಂತೋಷ ಪಡುತ್ತಾರೆ. ಇಂತಹ ವಿಚಿತ್ರ ಖಯಾಲಿ ಇವರದ್ದು.

ಇನ್ನು ಧಾರ್ಮಿಕ ಪಂಡಿತರು ಇವರಿಗೆ ತಿಳಿ ಹೇಳುವ ಬದಲು ಅವರು ಕೊಡುವ ಎಂಜಲು ಹರಾಮಿ ದೇಣಿಗೆ ಸ್ವೀಕರಿಸಿ ಕಾರ್ಯಕ್ರಮಗಳಲ್ಲಿ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಇಂತಹ ಕೆಲ ಶ್ರೀಮಂತರ ಕೌಟುಂಬಿಕ ಸಮಸ್ಯೆಯನ್ನೇ ಅವರಿಗೆ ಬಗೆಹರಿಸಿಕೊಳ್ಳಲಾಗುತ್ತಿಲ್ಲ. ಒಳಗಿನ ಗುಟ್ಟು ಶಿವನೇ ಬಲ್ಲ ಅನ್ನುವಂತೆ ಇವರು ಮಾಡುವ ಕೆಲಸ ನೋಡಿದರೆ ಯಾರೂ ಇವರನ್ನು ಹತ್ತಿರಕ್ಕೆ ಸೇರಿಸಲಾರರು. ಆದರೆ ಅವರಲ್ಲಿರುವ ದುಡ್ಡು ಕೆಲವರನ್ನು ಬಾಯ್ಮುಚ್ಚಿಸುತ್ತದೆ.

ಎಲ್ಲಾ ಶ್ರೀಮಂತರು ಈ ರೀತಿ ಇರಲ್ಲ. ಕೋಟಿಗಟ್ಟಲೆ ದುಡ್ಡಿದ್ದರೂ ಸಾತ್ವಿಕ ರೀತಿಯಲ್ಲಿ ಬದುಕುವ ಅನೇಕ ಶ್ರೀಮಂತರಿದ್ದಾರೆ. ಒಳ್ಳೊಳ್ಳೆಯ ತರವಾಡ್ ಇರುವ ಶ್ರೀಮಂತರು, ಹಾಜರುಗಳು ನಮಗ್ಯಾಕೆ ಈ ಉಸಾಬರಿ ಎಂದು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿರುತ್ತಾರೆ. ಪ್ರಚಾರಕ್ಕೆ ಹಾತೊರೆಯಲ್ಲ. ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಲೇ ಇರುತ್ತಾರೆ. ದೇವನ ಭಯದಿಂದ ಜೀವಿಸುತ್ತಲೇ ಇರುತ್ತಾರೆ. ದೇವನು ಕೊಟ್ಟ ಸಂಪತ್ತನ್ನು ಒಳ್ಳೆಯದಕ್ಕೆ ವಿನಿಯೋಗಿಸುತ್ತಲೇ ಇರುತ್ತಾರೆ. ವೈಯುಕ್ತಿಕವಾಗಿಯೂ ಕಪ್ಪು ಚುಕ್ಕೆ ಮೆತ್ತಿಕೊಂಡವರಲ್ಲ. ಆದರೆ ಕೆಲವು ಕಂಟ್ರಿ ಕಾಕಾ.. ಉದ್ಯಮಿಗಳ ರಂಗೀನ್ ಆಟದಿಂದಾಗಿ ಒಳ್ಳೆಯ ಮನೆತನದ ಶ್ರೀಮಂತರು ಫಜೀತಿಗೆ ಒಳಗಾಗುವುದು ಇದೆ. ಬಿಳಿಯಾಗಿರುವುದೆಲ್ಲ ಹಾಲಲ್ಲ, ವಿಷವೂ ಅಡಗಿರುತ್ತದೆ. ದುಡ್ಡಿದೆ, ದೇಣಿಗೆ ನೀಡುತ್ತಾರೆ ಅನ್ನುವ ಕಾರಣಕ್ಕೆ ಶ್ರೀಮಂತರು ಮಾಡುವ ಎಲ್ಲಾ ತಪ್ಪನ್ನು ಒಪ್ಪಿಕೊಳ್ಳಲಾಗುವುದಿಲ್ಲ. ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ ಪಂಡಿತ ವರ್ಗದಲ್ಲೂ ಮೂಡಬೇಕು. ಹಾಗಾದರೆ ಮಾತ್ರ ಇವರು ಬದಲಾಗಬಹುದು. ಶ್ರೀಮಂತರ ಅನಾಚಾರವನ್ನು ಖಂಡಿಸದೆ ಸಾಮಾನ್ಯರ ಕಡೆಗೆ ಮಾತ್ರ ತಮ್ಮ ಉಗ್ರ ರೂಪ ತಾಳಿದರೇ ಅದನ್ನು ಒಪ್ಪಲಾಗದು. (ಕ್ಷಮಿಸಿ; ಈ ವರದಿಯು ಇತ್ತೀಚೆಗೆ ದಿಢೀರ್ ಹುಟ್ಟಿಕೊಂಡ ಕೆಲವು ಪ್ರಚಾರ ಪ್ರೀಯ ಹತ್ತದಿನೈದು ಬೆರಳೆಣಿಕೆಯ ಸ್ವಯಂಘೋಷಿತ ಕಾಕಾಗಳಿಗೆ ಮಾತ್ರ ಸೀಮಿತ)