ಅಪ್ರಾಪ್ತ ಹುಡುಗಿಯ ಹುಚ್ಚಾಟ; 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ

ರಾಜ್ಯ

ಡ್ರಗ್ಸ್ ಖರೀದಿಗಾಗಿ ಪುರುಷರನ್ನು ತನ್ನ ಬುಟ್ಟಿಗೆ ಹಾಕಿಕೊಂಡು, ಲೈಂಗಿಕ ಸುಖ ನೀಡಿ, ಉಚಿತ HIV ನೀಡಿದ ಅಪ್ರಾಪ್ತೆ

ರಾಜ್ಯದಲ್ಲಿ ಎಚ್ ಐ ವಿ ಸೋಂಕು ಮತ್ತೆ ಜನರನ್ನು ಕಾಡುತ್ತಿದ್ದು, ಸೋಂಕಿನ ಸುಳಿಗೆ ಸುಶಿಕ್ಷಿತರು ಹಾಗೂ ಯುವ ಜನಾಂಗ ಹೆಚ್ಚಾಗಿ ಸಿಲುಕಿರುವುದು ಕಂಡುಬಂದಿದೆ.

ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಹುಡುಗಿಯ ಹುಚ್ಚಾಟಕ್ಕೆ ಸರಿ ಸುಮಾರು 20 ಮಂದಿ HIV ಸೋಂಕಿಗೆ ಒಳಗಾಗಿರುವ ಆಘಾತಕಾರಿ ಘಟನೆ ರಾಮನಗರದ ನೈನಿತಾಲ್ ಎಂಬ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಅವರೊಂದಿಗೆ ಲೈಂಗಿಕ ಸುಖನೀಡಿ ಡ್ರಗ್ಸ್ ಗೆ ಬೇಕಾದ ಹಣವನ್ನು ಸಂಪಾದನೆ ಮಾಡುತ್ತಿದ್ದಳು. ಆಕೆಯ ಆಮಿಷಕ್ಕೆ ಮರುಳಾದ ಹುಡುಗರು ಇದೀಗ ಪರಿತಪಿಸುವಂತಾಗಿದೆ.

ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದು ಹಾಸಿಗೆ ಹಂಚಿಕೊಂಡಿದ್ದಾಳೆ. ಅದರಲ್ಲಿ ಕೆಲವರು ವಿವಾಹಿತರು. ಇನ್ನು ಕೆಲವರು ಯುವಕರು. ವಿವಾಹಿತರ ಪತ್ನಿಯರಿಗೂ HIV ಸೋಂಕು ಹರಡಿದೆಯಂತೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆಯಂತೆ.

ಅ ಹುಡುಗಿ ಬಡ ಕುಟುಂಬಕ್ಕೆ ಸೇರಿದವಲೆಂಬುದು ತನಿಖೆಯಿಂದ ತಿಳಿದು ಬಂದಿದೆ. ಹಣಕ್ಕಾಗಿ ಆಕೆ ಮಾಡುತ್ತಿದ್ದ ಈ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆಯ ಹೆಸರು ಬಹಿರಂಗವಾಗುತ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದರು. ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ.

ರಾಮನಗರದಲ್ಲಿ 17 ತಿಂಗಳಲ್ಲಿ 45 ಮಂದಿಗೆ HIV ಸೋಂಕು ಪತ್ತೆಯಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಮಾತ್ರ 19 ಜನರು HIV ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 30 ಪುರುಷರು ಮತ್ತು 15 ಮಹಿಳೆಯರು ಸೇರಿದ್ದಾರೆ. 30 ಪುರುಷರಲ್ಲಿ 20 ಯುವಕರು ಮಾದಕ ವ್ಯಸನಿ ಹುಡುಗಿಯಿಂದ ಸೋಂಕಿಗೆ ಒಳಗಾದವರು.

ಯುವಕರಲ್ಲಿ ಎಚ್‌ಐವಿ‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜನವರಿಯಿಂದ ಆಗಸ್ಟ್ 2023 ರವರೆಗೆ, 500 ಯುವಕರು ಈ ಕಾಯಿಲೆಗೆ ಧನಾತ್ಮಕವಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ 25 ವರ್ಷ ದಾಟಿದ ಟ್ರಕ್ ಡ್ರೈವರ್‌ಗಳು, ಲೈಂಗಿಕ ಕಾರ್ಯಕರ್ತರು, ವಲಸೆ ಕಾರ್ಮಿಕರಲ್ಲಿ ಏಡ್ಸ್ ಹೆಚ್ಚಾಗಿತ್ತು. ಈಗ ಇದು 18 ರಿಂದ 25 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗಿದೆ.

ರಾಜ್ಯದಲ್ಲಿ ಒಟ್ಟು 4,23,369 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಪುರುಷರು 1,82,973, ಮಹಿಳೆಯರು 2,15,519, ಯುವಕರು 87,266 ಹಾಗೂ 10,376 ಯುವತಿಯರಲ್ಲಿ ಸೋಂಕು ಕಂಡುಬಂದಿದೆ.