ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಐಕಾನ್ ತುಂಬೆ ಶೆಟ್ರು.!

ಕರಾವಳಿ

ಕರಾವಳಿ, ಮಲೆನಾಡಿನಲ್ಲಿ ಲಗಾಡಿ ತೆಗೆದ ನಾಯಕರಿಗೆ ಸಿಂಹಸ್ವಪ್ನವಾದ ಯುವ ನಾಯಕ

ಹೊಂದಾಣಿಕೆ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಧೂಳೀಪಟ.!

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಡಿಶುಂ.. ಡಿಶುಂ ಸಖತ್ ಸುದ್ದಿ ಮಾಡಿದ್ದಂತೂ ಸತ್ಯ. ಕಛೇರಿ ಒಳಗಡೆ ನಡೆದ ಭಾರೀ ತಮ್ಮಣಕ್ಕೆ ಪೇಚಿಗೆ ಸಿಲುಕಿದ ನಾಲಾಯಕರು ಮೀಡಿಯಾದೆದುರು ನಮ್ಮ ನಡುವೆ ಹಂಗೇನಿಲ್ಲ, ಎಲ್ಲವೂ ಸರಿಯಾಗಿದೆ ಎಂದು ತೇಪೆ ಹಚ್ಚಿದರೂ ಕಾಂಗ್ರೆಸ್ ನಾಯಕರೊಳಗೆ ಬೂದಿ ಮುಚ್ಚಿದ ಕೆಂಡದಂತಿದೆ. ಪಾಪ ಕಾರ್ಯಕರ್ತರು ಮಾತ್ರ ಈ ಹೈಡ್ರಾಮವನ್ನು ಎಂಜಾಯ್ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಾಲಾಯಕ್ ರ ನಡೆಯಿಂದ ರೋಸಿ ಹೋಗಿರುವ ಕಾರ್ಯಕರ್ತರು ಇನ್ನಾದರೂ ಈ ದಂಡಪಿಂಡಗಳು ಜಾಗ ಖಾಲಿ ಮಾಡಿ ತೊಲಗಲಿ ಎಂದು ಕಾಯುತ್ತಿದ್ದಾರೆ. ಇವರ ನಡವಳಿಕೆಯಿಂದ ಪಕ್ಷ ಅಧೋಗತಿಗೆ ತಲುಪಿದೆ. ಆದರೆ ಹೈಕಮಾಂಡ್ ಕಾರ್ಯಕರ್ತರ ಧ್ವನಿಗೆ ಸ್ಪಂದಿಸುತ್ತಿಲ್ಲ. ಲಗಾಡಿ ತೆಗೆದ ನಾಯಕರಿಗೆ ಮಣೆ ಹಾಕುತ್ತಿದ್ದಾರೆ. ಕಾರ್ಯಕರ್ತರ ಆಕ್ರೋಶವನ್ನು ಕೇಳುವವರೇ ಇಲ್ಲವಾಗಿದೆ. ಮೊನ್ನೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಘಟನಾವಳಿಯ ನಂತರ ಯುವ ನಾಯಕ ತುಂಬೆ ಪ್ರಕಾಶ್ ಶೆಟ್ಟಿ ಕಾರ್ಯಕರ್ತರ ಐಕಾನ್ ಆಗಿ ಮಿಂಚುತ್ತಿದ್ದಾರೆ. ಕಾರ್ಯಕರ್ತರು ಜಿಲ್ಲೆಯಲ್ಲಿ ಯುವ ನಾಯಕರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಹೊಂದಾಣಿಕೆಯ ರಾಜಕಾರಣಿಗಳು ಬೇಡ, ನಿಷ್ಠಾವಂತ ಕಾಂಗ್ರೆಸ್ಸಿಗರು ಬೇಕು ಅನ್ನುವ ಕೂಗಿಗೆ ಬಲ ಬಂದಿದೆ.

ತುಂಬೆ ಪ್ರಕಾಶ್ ಶೆಟ್ಟಿ ಯುವ ಕಾಂಗ್ರೆಸ್ ಮುಖಂಡರು. ನಿಷ್ಠಾವಂತ ಕಾಂಗ್ರೆಸ್ಸಿಗ. ಹಗಲು ಕಾಂಗ್ರೆಸ್, ರಾತ್ರಿ ಬಿಜೆಪಿ ಜಾಯಮಾನದವರಲ್ಲ. ಜಿಲ್ಲೆಯ ಪ್ರಬಲ ಜಾತ್ಯತೀತ ನಾಯಕ ರಮಾನಾಥ ರೈ ಅವರ ಗರಡಿಯಲ್ಲಿ ಪಳಗಿದವರು. ಜಿಲ್ಲಾ ಕಾಂಗ್ರೆಸ್ಸಿನ ಆಯಕಟ್ಟಿನ ಜಾಗದಲ್ಲಿ ಕೂತ ಕೆಲವು ನಾಯಕರು ತಮಗೆ ಮನಬಂದಂತೆ ಕಾಂಗ್ರೆಸ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಜುಜುಬಿ ಹತ್ತು ಇಪ್ಪತ್ತು ಓಟು ಪಡೆಯಲು ಕೆಫಾಸಿಟಿ ಇಲ್ಲದವರು ಅಧ್ಯಕ್ಷ, ನಿಗಮ ಮಂಡಳಿ, ವಿಧಾನಪರಿಷತ್ ಸದಸ್ಯತ್ವ ಪಡೆಯುತ್ತಿದ್ದಾರೆ. ಇವರು ಪಕ್ಷ ಕಟ್ಟುವುದು ಬಿಡಿ ಪಕ್ಷವನ್ನು ಲಗಾಡಿ ತೆಗೆದುಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುವ ನಿಷ್ಠಾವಂತ ನಾಯಕರು, ಕಾರ್ಯಕರ್ತರು ಈಗಲೂ ಇದ್ದಾರೆ. ಆದರೆ ಅವರೆಲ್ಲರನ್ನೂ ಬದಿಗೆ ಸರಿಸಿ.. ನಾಲಾಯಕ್ ಗಳು ಮಿಂಚುತ್ತಿದ್ದಾರೆ. ತುಂಬೆ ಪ್ರಕಾಶ್ ಶೆಟ್ಟಿ ರೆಬೆಲ್ ಆದ ನಂತರ ಹೊಂದಾಣಿಕೆ ರಾಜಕಾರಣಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವಂತಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಲು ಯಂಗ್ ಅಂಡ್ ಡೈನಾಮಿಕ್ ನಾಯಕರು ಬೇಕು. ಆದರೆ ಅಂತಹವರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಷಡ್ಯಂತ್ರವೊಂದು ನಡೆಯುತ್ತಿದೆ. ತುಂಬೆ ಪ್ರಕಾಶ್ ಶೆಟ್ಟಿ ಮುತ್ತಪ್ಪ ರೈ ಅಂತಹ ಬಲಾಡ್ಯರನ್ನು ಎದುರು ಹಾಕಿಕೊಂಡು ಮುಂದೆ ಬಂದವರು. ಈಗಿನ ನಾಲಾಯಕ್ ರಾಜಕಾರಣಿಗಳಿಗೆ ತುಂಬೆ ಶೆಟ್ರು ರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಇದನ್ನೆಲ್ಲ ಅರಿತೆ ಕಾಂಗ್ರೆಸ್ ಕಾರ್ಯಕರ್ತರ ದಂಡು ತುಂಬೆ ಶೆಟ್ರ ಬೆನ್ನಿಗೆ ನಿಂತಿವೆ.

ರಮಾನಾಥ ರೈ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನಾನುರಾಯಿಯಾಗಿದ್ದವರು. ಆದರೆ ಈಗಿನ ಪರಿಸ್ಥಿತಿಯಲ್ಲಿ ರೈ ಅಂತಹ ಬಲಾಡ್ಯರೇ ಮೂಲೆ ಸೇರುವಂತಾಗಿದೆ. ಈಗಿನ ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ತನ್ನ ವಾರ್ಡ್ ನಲ್ಲೇ ಕಾಂಗ್ರೆಸ್ ಗೆ ಲೀಡ್ ತಂದುಕೊಡಲು ಸಾಧ್ಯವಾಗಿಲ್ಲ. ಇನ್ನು ಜಿಲ್ಲಾ ಕಾಂಗ್ರೆಸ್ ಅನ್ನು ಎಷ್ಟರಮಟ್ಟಿಗೆ ಕಟ್ಟಬಹುದು. ಇನ್ನು ಪಕ್ಷಕ್ಕಾಗಿ ನಯಾ ಪೈಸೆಯ ಕೆಲಸ ಮಾಡದ, ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ವ್ಯವಹಾರಕ್ಕಿಳಿದ ನಾಯಕನಿಗೆ ಕಾರ್ಯಾಧ್ಯಕ್ಷ ಹುದ್ದೆ. ಮಲೆನಾಡಿನಲ್ಲಿ ಉಸಿರಾಡುತ್ತಿದ್ದ ಕಾಂಗ್ರೆಸ್ ಗೆ ಈ ವಯ್ಯಾ ಉಸ್ತುವಾರಿಯಾದುದೇ ತಡ, ಪಕ್ಷ ಉಸಿರಾಡುವುದನ್ನೇ ನಿಲ್ಲಿಸಿದೆ. ಇಂತಹವರಿಗೆ ವಿಧಾನಪರಿಷತ್ ಸ್ಥಾನ ಮಾನ ಕೂಡ ಬೇರೆ ಕೇಡು. ತಮ್ಮ ವಿದ್ಯಾ ಸಂಸ್ಥೆ ಕಾರ್ಯಾಚರಿಸುವ ಪಂಚಾಯತ್ ಗೆ ಲಕ್ಷಾಂತರ ರೂಪಾಯಿ ಟ್ಯಾಕ್ಸ್ ಪಾವತಿಸಲು ಅಲ್ಲಿನ ಪಂಚಾಯತ್ ಅಧಿಕಾರಿಗಳು ದಮ್ಮಯ್ಯ ಹಾಕಬೇಕಂತೆ! ಹೈಕೋರ್ಟ್ ಆರ್ಡರ್ ಅದೂ ಇದೂ ಅಂತ ಸಬೂಬು ಹೇಳಿ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿರುವ ಇವರೆಂತಹ ಜನ ನಾಯಕರು. ಒಂದು ಕಡೆ ಪಕ್ಷವನ್ನು ಲಗಾಡಿ ತೆಗೆದುಬಿಟ್ಟು, ಇನ್ನೊಂದು ಕಡೆ ವ್ಯವಹಾರವನ್ನು ಸಲೀಸಾಗಿ ನಡೆಸಲು ಪಕ್ಷವನ್ನು ಅಪ್ಪಿಕೊಂಡಿದ್ದಾರಷ್ಟೇ. ಇಂತಹವರಿಂದ ಪಕ್ಷ ಸರ್ವನಾಶವಾಗದೇ ಇನ್ನೇನೂ ಆಗಲು ಸಾಧ್ಯ. ಇಬ್ಬರು ಸಾಡೇಸಾತಿ ನಾಯಕರಿಂದ ಪಕ್ಷ ಎಕ್ಕುಟ್ಟಿ ಹೋಗುತ್ತಿದೆ. ಇವರಿಬ್ಬರನ್ನು ತಮಗೆ ಬೇಕಾದ ಹಾಗೆ ಕುಣಿಸುತ್ತಾ ಕಾಕಾ ರಾಜಕಾರಣಿಯೊಬ್ಬರು ತಮ್ಮ ವಿರೋಧಿಗಳನ್ನೆಲ್ಲ ಮೂಲೆ ಸೇರುವಂತೆ ಮಾಡುತ್ತಿದ್ದಾರೆ. ಇವರಿಗೆಲ್ಲ ಪಕ್ಷ ಬೆಳವಣಿಗೆ ಮುಖ್ಯವಲ್ಲ. ನಾಯಕರನ್ನು ರಾಜಕೀಯವಾಗಿ ಮುಗಿಸುವುದು, ತಮ್ಮ ವ್ಯವಹಾರವನ್ನು ಸಲೀಸಾಗಿ ನಡೆಸುವುದು ಅಷ್ಟೇ.

ಪಕ್ಷ ಸೋಲಿಗೆ ಕರಾವಳಿಯಲ್ಲಿ ಹಿಂದುತ್ವ ಕಾರಣ ಅಂತ ರೆಡಿಮೇಡ್ ಉತ್ತರ ಸಿದ್ಧಪಡಿಸಿ ಸೇಫ್ ಆಗುತ್ತಿದ್ದಾರೆ. ರಮಾನಾಥ ರೈ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭ ಕಾಂಗ್ರೆಸ್ 8 ರಲ್ಲಿ 7 ಸ್ಥಾನ ಗೆದ್ದಿದ್ದು ಹೇಗೆ? ಆವಾಗ ಹಿಂದುತ್ವ ಇರಲಿಲ್ಲವೇ? ಪ್ರಾಮಾಣಿಕರಾಗಿ ದುಡಿದರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟವಲ್ಲ. ಆದರೆ ಇವರಿಗೆ ಶಿಕ್ಷಣ ಉದ್ಯಮ, ವೈನ್ ಉದ್ಯಮ ಬೆಳೆದರಷ್ಟೇ ಸಾಕು. ಪಕ್ಷ ಎಕ್ಕುಟ್ಟಿ ಹೋದರೆ ನಮಗೇನು ಅನ್ನುವ ತೀರ್ಮಾನದಲ್ಲಿದ್ದಾರೆ.

ಪಕ್ಷದ ಹೈಕಮಾಂಡ್ ಇನ್ನಾದರೂ ಕರಾವಳಿ ಭಾಗದ ಕೆಲವೊಂದು ನಾಲಾಯಕ್ ರನ್ನು ಪಕ್ಷದಿಂದ ಒಡ್ಡೋಡಿಸುವ ಕೆಲಸ ಮಾಡಬೇಕಿದೆ. ಹೊಂದಾಣಿಕೆಯ ರಾಜಕಾರಣಿಗಳನ್ನು ಎತ್ತಂಗಡಿ ಮಾಡಿ, ನಿಷ್ಠಾವಂತರ ಕೈಗೆ ಪಕ್ಷದ ಚುಕ್ಕಾಣಿ ಕೊಡಬೇಕಾಗಿದೆ. ಹಾಗಾದರೆ ಮಾತ್ರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ಗತವೈಭವಕ್ಕೆ ಮರಳಬಹುದು. ಪ್ರಕಾಶ್ ಶೆಟ್ಟಿ ಯಂತಹ ಹತ್ತಾರು ನಿಷ್ಠಾವಂತ ಡೈನಾಮಿಕ್ ಯುವ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ಕೊಟ್ಟರೆ ಪಕ್ಷ ಫೀನಿಕ್ಸ್ ನಂತೆ ಎದ್ದು ಬರಬಹುದು. ಶಿಕ್ಷಣ ಉದ್ಯಮಿ, ವೈನ್ ಶಾಪ್ ಮಾಲಕರಿಗೆ ಪಕ್ಷ ಇನ್ನೂ ಕೂಡ ಮಣೆ ಹಾಕಿ ಕೂತರೆ ಜಿಲ್ಲೆಯ ಕಾಂಗ್ರೆಸ್ ನ್ನು ಮ್ಯೂಸಿಯಂ ನಲ್ಲಿ ನೋಡಬೇಕಾದ ದಿನ ಬರಬಹುದು.