ಪುತ್ತೂರು: ಹನಿಟ್ರ್ಯಾಪ್ ಗೆ ಬಲಿಯಾದ್ರೆ ಹೈದರಾಲಿ?

ಕರಾವಳಿ

ಪುತ್ತೂರು ತಾಲೂಕಿನ ಕುಂಬ್ರ ಗಟ್ಟಿಮನೆ ಸನ್ಯಾಸಿಗುಡ್ಡೆ ನಿವಾಸಿ ಹೈದರಾಲಿ ಎಂಬವರು ಡಿಸೆಂಬರ್ 15 ರಂದು ಮನೆ ಸಮೀಪದ ಖಾಸಗಿಯವರಿಗೆ ಸೇರಿದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಸಂಚು ಇರುವುದಾಗಿ ಹೈದರಾಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮರದ ವ್ಯಾಪಾರಿಯಾಗಿರುವ 37 ವರ್ಷದ ಹೈದರಾಲಿ ಆತ್ಮಹತ್ಯೆಯ ಬಗ್ಗೆ ಸ್ಥಳೀಯವಾಗಿ ನಾನಾ ಊಹಾಪೋಹಗಳು ಎದ್ದಿದ್ದು ಈ ಬಗ್ಗೆ ಹೈದರಾಲಿ ಅಣ್ಣ ಸಯ್ಯದ್ ಅಲವಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮನ ಆತ್ಮಹತ್ಯೆ ಹಿಂದೆ ಬೇರೆಯದ್ದೇ ಕಾರಣವಿರಬೇಕೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೊಬೈಲ್ ಪರಿಶೀಲಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಮರದ ವ್ಯಾಪಾರಿ ಹೈದರಾಲಿಗೆ ಸ್ಥಳೀಯ ಮುಸ್ಲಿಂ ಹೆಂಗಸಿನೊಂದಿಗೆ ಸಂಪರ್ಕ ಇತ್ತಂತೆ. ಇದೇ ಕಾರಣದಿಂದ ಬ್ಲ್ಯಾಕ್ ಮೇಲ್ ಗೆ ಸಿಲುಕಿದ್ದರಾ? ಹನಿಟ್ರ್ಯಾಪ್ ಗೆ ಒಳಗಾಗಿದ್ದರಾ? ಮಾನಕ್ಕೆ ಅಂಜಿ ಆತ್ಮಹತ್ಯೆಗೈದಿದ್ದರಾ? ಇಂತಹ ಹಲವು ಸುದ್ದಿಗಳು ಸ್ಥಳೀಯವಾಗಿ ಹರಿದಾಡುತ್ತಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವಿರುವ ಸಾಧ್ಯತೆ ಇದೆ ಅನ್ನುವ ಅನುಮಾನಗಳನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಗಳು ಕೇಳಿ ಬರುತ್ತಿದೆ.