ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMPV ಸೋಂಕು ತಗುಲಿರುವ ಶಂಕೆ

ರಾಜ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಸೋಂಕು ತಗುಲಿರುವ ಶಂಕೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಪ್ರಕರಣ ಪತ್ತೆಯಾಗಿದೆ. ರಕ್ತದ ಮಾದರಿಯನ್ನು ಇನ್ನೂ ಪ್ರಯೋಗಾಲಯದಲ್ಲಿ (ಸರ್ಕಾರ) ಪರೀಕ್ಷಿಸಲಾಗಿಲ್ಲ ಮತ್ತು ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.