ಬಂಟ್ವಾಳ: ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ದ.ಕ ಕರ್ನಾಟಕ ಮತ್ತು SKSSF ಮಾಣಿ ಸೂರಿಕುಮಾರ್ ನೀರಪಾದೆ ಯೂನಿಟ್ ಇದರ ವತಿಯಿಂದ ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರವು 05/01/25 ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ತನಕ ಬದ್ರಿಯಾ ಜುಮ್ಮಾ ಮಸೀದಿ ಸೋರಿಕುಮಾರ್ ವಠಾರದಲ್ಲಿ ಮರ್ಹೂಮ್ ಮೊಹಮ್ಮದ್ ಸರ್ಫ್ರಾಝ್ ವೇದಿಕೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ 63 ರಕ್ತದಾನಿಗಳು ರಕ್ತವನ್ನು ನೀಡುವ ಮೂಲಕ ಜೀವಾಧಾನಿಯಾದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ
BJM ಸೂರಿಕುಮೇರ್ ಸ್ಥಳೀಯ ಖತೀಬರಾದ ಹಸೈನಾರ್ ಸಹದಿ, ಅಬ್ದುಲ್ ಬಶೀರ್ ಮಾಣಿ ಅಧ್ಯಕ್ಷರು SKSSF ಮಾಣಿ ಸೂರಿಕುಮೇರ್, ಸೌಕತ್ ಇಂದಬೆಟ್ಟು ಅಧ್ಯಕ್ಷರು ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್(ರಿ)ದ ಕ ಕರ್ನಾಟಕ, ಪಿ ಜೆ ಅಬ್ದುಲ್ ಅಝೀಝ್ ಗಡಿಯಾರ, ಹಾಜಿ ರಫೀಕ್ ಸುಲ್ತಾನ್ ಅಧ್ಯಕ್ಷರು ಡಿಗ್ನಿಟಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕೊಡಾಜೆ, ರಶೀದ್ ನೀರಪಾದೆ ಉಧ್ಯಮಿ ಮತ್ತು ಉಪಾಧ್ಯಕ್ಷರು SKSSF ನೀರಪಾದೆ ಮಾಣಿ ಸೋರಿಕುಮೇರ್ ಯೂನಿಟ್, ಹಾಗೂ ಹಲವಾರು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

BJM ಸೂರಿಕುಮೇರ್ ಸ್ಥಳೀಯ ಇದರ ಖತೀಬರಾದ ಹಸೈನಾರ್ ಸಹದಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಕ್ತದಾನ ಹಾಗೂ ಸಮಾಜಸೇವೆ ಕೆಲಸಕಾರ್ಯಗಳ ಬಗ್ಗೆ ಅತಿಥಿಗಳು ಸ್ಲಾಘನೀಯ ಮಾಡುವ ಮೂಲಕ ಇನ್ನಷ್ಟು ಇಂತಹ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಯುವಕರಿಗೆ ಉಮ್ಮಸ್ಸುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಹಲವಾರು ಸಾಧಕರಿಗೆ ಸನ್ಮಾನಿಸಲಾಯಿತು. ಸರಿ ಸುಮಾರು 63 ಮಂದಿ ದಾನಿಗಳು ರಕ್ತವನ್ನು ನೀಡುವ ಮೂಲಕ ಜೀವಾಧಾನಿಗಳಾದರು.