ದಶಕದಿಂದ ಈಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬರೆಯುವ ಪರೀಕ್ಷಾರ್ಥಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಲವಾರು ಅಡ್ಡ ಮಾರ್ಗಗಳನ್ನು ಕಂಡುಕೊಂಡು ಯಶಸ್ವಿಯಾಗಿದ್ದಾರೆ. ಅನುಸರಿಸರಿಸಿ ಸಣ್ಣ ಹುದ್ದೆಯಿಂದ ಹಿಡಿದು ಐ.ಎ.ಎಸ್. ಮತ್ತು ಕೆ.ಎ.ಎಸ್. ಪರೀಕ್ಷೆಗಳ ಆಧಾರದಲ್ಲಿ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಡಿ ಗ್ರೂಪ್, ಸಿ ಗ್ರೂಪ್ ಗಳಿಗೆ ಅಷ್ಟೇ ಆಗಿಲ್ಲ ಎ ಗ್ರೂಪ್ ಮತ್ತು ಬಿ ಗ್ರೂಪ್ ಗಳ ಹುದ್ದೆಯಲ್ಲೂ ಇಂತಹ ಘಟನೆಗಳು ನಡೆದಿವೆ.
ಯು.ಪಿ.ಎಸ್.ಸಿ .ಮತ್ತು ಕೆ.ಪಿಎಸ್.ಸಿ. ಸಂಸ್ಥೆಗಳಿಂದ ನಡೆಸಿದ ಐ.ಎ.ಎಸ್. ಮತ್ತು ಕೆ.ಎ.ಎಸ್. ಶ್ರೇಣಿಯ ಹುದ್ದೆಗಳ ಪರೀಕ್ಷೆಗಳಲ್ಲೂ ಅಕ್ರಮಗಳು ನಡೆದವು. ಅಕ್ರಮಗಳಿಗೆ ಕಾರಣವಾದ ಡಾ. ಕೃಷ್ಣ ಅಂತಹ ಮಹಾಶಯ ತಾನು ಮಾಡಿದ ತಪ್ಪಿಗೆ ಜೈಲಿಗೂ ಹೋದರು. ಇಂತಹ ಘಟನೆ ಗಳು ನಡೆದಿವೆ. ನಮ್ಮ ರಾಜ್ಯದಲ್ಲಿ ಕೆ.ಪಿ.ಎಸ್ಸಿ .ನಡೆಸಿದ ಕೆ.ಎ.ಎಸ್. ಪರೀಕ್ಷೆಗಳಲ್ಲಿ ಕೆಲವರು ಅಡ್ಡ ಮಾರ್ಗದಲ್ಲಿ ಪರೀಕ್ಷೆ ಬರೆದು, ಅಡ್ಡ ಮಾರ್ಗದಲ್ಲಿ ಹೆಚ್ಚಿನ ಅಂಕಗಳನ್ನು ತೋರಿಸಿಕೊಂಡು ಕೆ.ಎ.ಎಸ್. ಹುದ್ದೆಗಳನ್ನು ಪಡೆದಿರುವ ಉದಾಹರಣೆಗಳು ಇವೆ.
ಅಡ್ಡ ಮಾರ್ಗದಲ್ಲಿ ಹುದ್ದೆ ಗಿಟ್ಟಿಸಿಕೊಂಡು ರಾಜಾರೋಷವಾಗಿ ನಮ್ಮ ಜಿಲ್ಲೆಯಲ್ಲಿಯೂ ಕೆ.ಎ.ಎಸ್. ಶ್ರೇಣಿಯ ಅಧಿಕಾರಿಗಳಾಗಿ ಹಲವರು ಕರ್ತವ್ಯದ ಹೆಸರಲ್ಲಿ ಮೆರೆದು ಹೋದವರು ಇದ್ದಾರೆ. ಇಂತಹ ಅಡ್ಡ ಮಾರ್ಗಿಗಳ ಅಧಿಕಾರಿಗಳು ಈಗ ಐ.ಎ.ಎಸ್. ಶ್ರೇಣಿಯ ಅಧಿಕಾರಿಗಳಾಗಿ ಬಡ್ತಿ ಪಡೆದು ಅಧಿಕಾರ ನಡೆಸುತ್ತಿದ್ದಾರೆ. ಬಹುದೊಡ್ಡ ದುರಂತವೆನ್ನದೆ ವಿಧಿಯಿಲ್ಲ. ಇದು ನಮ್ಮ ದೇಶದಲ್ಲಿ ಆಡಳಿತ ನಡೆಸುವವರ ಮತ್ತು ಕಾನೂನು ಜಾರಿಗೆ ತರುವವರ ಲೋಪವನ್ನು ಎತ್ತಿ ತೋರಿಸುತ್ತದೆ.

ಹಿಂದಿನ ಬಿ.ಜೆ.ಪಿ. ಸರ್ಕಾರದ ಅಧಿಕಾರ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ದಂಧೆ ಮಾಡುವ ಜೂಜಾಟದ ಅಡ್ಡೆಯಂತೆ ಆಗಿದ್ದವು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೋಲಿಸ್ ಇಲಾಖೆಯ ಎ.ಡಿ.ಜಿ.ಪಿ., ಡಿ.ವೈ.ಎಸ್.ಪಿ. ಹಂತದ ಅಧಿಕಾರಿಗಳೇ ದಂದೆಯಲ್ಲಿ ಸಿಲುಕಿ ಜೈಲಿಗೆ ಹೋಗಬೇಕಾಗಿ ಬಂದಿತು. ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಥಿತಿಯನ್ನು ಈ ಹಂತಕ್ಕೆ ತಂದು ನಿಲ್ಲಿಸಿದ್ದ ಬಿ.ಜೆ.ಪಿ .ಸರ್ಕಾರದ ಅಧ್ವಾನಗಳಿಂದ ಪಾಠ ಕಲಿತಿರುವ ಸರ್ಕಾರ ಮುಂಜಾಗ್ರತೆ ವಹಿಸಿರುವುದರಿಂದ ಎಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಗರಣಗಳು ನಡೆಯದಂತೆ ಎಚ್ಚರ ವಹಿಸಿರುವುದರಿಂದ ಜನಿವಾರ ಧರಿಸಿದವರು ಅದನ್ನು ತೆಗೆದು ಪರೀಕ್ಷೆ ಬರೆಯಬೇಕಾದಂತ ಪರಿಸ್ಥಿತಿಗೂ ಬಂದು ನಿಂತಿದೆ.
ಈ ಹಿಂದೆ ನಡೆದಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವ ಯಾವ ಅಡ್ಡ ಮಾರ್ಗಗಳಲ್ಲಿ ಪರೀಕ್ಷೆಗಳು ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಹಿಂದಿನ ಕಹಿ ಘಟನೆಗಳಿಂದ ಪಾಠ ಕಲಿತಿರುವ ಸರ್ಕಾರ ಮತ್ತು ಪರೀಕ್ಷಾ ರಾಜಕಾರಣಿಗಳು ಹೆಚ್ಚು ಜಾಗೃತೆ ವಹಿಸಿರುವುದರಿಂದ ಜನಿವಾರದಂತ ಸಂಸ್ಕೃತಿ, ಸಂಸ್ಕಾರಕ್ಕೆ ಪೆಟ್ಟು ಬೀಳುವಂತ ಘಟನೆಗಳು ನಡೆಯುವುದಕ್ಕೆ ಕಾರಣವಾಗಿದ್ದರೂ, ಮಕ್ಕಳ, ಯುವ ಸಮೂಹದ ಭವಿಷ್ಯ ರೂಪಿಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಲೋಪಗಳು ಆಗದಿರಲು ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳನ್ನು ನಾವುಗಳು ಸಹಿಸಲೇಬೇಕು ಮತ್ತು ಸ್ವಾಗತಿಸಲೇಬೇಕು.
✍️. ವೈ.ಬಿ. ಚಂದ್ರಕಾಂತ್, ಶಿವಮೊಗ್ಗ