ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದೆಯೇ.?

ರಾಜ್ಯ

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ ನಿಜವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ.! ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಇದನ್ನು ಗಮನಿಸಿದರೆ ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಗುವುದೇ.? ಎಂಬ ಆನುಮಾನ ಮೂಡಿದೆ.

ಭೂಪಟದಿಂದಲೇ ಒಂದು ದೇಶ ಕಣ್ಮರೆಯಾಗಲಿದೆ. ಭೂಕಂಪ, ಯುದ್ಧ, ಬಾಂಬ್ ದಾಳಿಗಳು ಹೆಚ್ಚಾಗಲಿವೆ ಎಂದು ಸರಿ-ಸುಮಾರು ಎರಡು ತಿಂಗಳ ಹಿಂದೆ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಜನರು ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿದ್ದಾರೆ. ಸಾವು-ನೋವುಗಳು ಹೆಚ್ಚಾಗಲಿವೆ ಎಂದು ಹೇಳಿದ್ದರು.

ಇದೀಗ ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದ ಭೀಕರತೆ ನೋಡಿದರೆ ಕೋಡಿ ಶ್ರೀಗಳ ಭವಿಷ್ಯ ನಿಜವಾಗುತ್ತಾ ಎಂಬ ಆತಂಕ ಎದುರಾಗಿದೆ. ಅಲ್ಲದೇ ಪ್ರಕೃತಿ ವಿಕೋಪ, ಭೀಕರ ಭೂಕಂಪ, ಯುದ್ಧ ಅನಾಹುತ, ಸಾವು-ನೋವುಗಳು ಸಂಭವಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು