ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ವತಿಯಿಂದ ರೌಡಿಗಳ ಪರೇಡ್‌

ರಾಜ್ಯ

ರೌಡಿಶೀಟರ್‌ಗಳನ್ನು ಗೂಡ್ಸ್ ವಾಹನದಲ್ಲಿ ಪ್ರಾಣಿಗಳಂತೆ ತುಂಬಿಕೊಂಡು ಬಂದ ಪೊಲೀಸರು

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ವತಿಯಿಂದ, ರೌಡಿಗಳ ಪರೇಡ್‌ನ್ನು ಇಟ್ಟುಕೊಂಡಿದ್ದು, ರೌಡಿಶೀಟರ್‌ಗಳನ್ನು ಗೂಡ್ಸ್ ವಾಹನದಲ್ಲಿ ಪ್ರಾಣಿಗಳಂತೆ ತುಂಬಿಕೊಂಡು ಬಂದಿದ್ದಾರೆ.
ಪ್ರತಿಯೊಂದು ಠಾಣೆಯ ಆಯಾ ವ್ಯಾಪ್ತಿಯಲ್ಲಿರುವ ರೌಡಿಶಿಟರ್‌ಗಳನ್ನು ಕರೆತರಲು ಕಮೀಷನರ್ ಎನ್ ಶಶಿಕುಮಾರ್ ಸಾಹೇಬ್ರು ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ರೌಡಿಶಿಟರ್‌ಗಳನ್ನು ಪ್ರಾಣಿಗಳಂತೆ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಬಂದಿದ್ದಾರೆ ಆಯಾ ಠಾಣೆಯ ಪೊಲೀಸರು. ಇದು ಸಾರ್ವಜನಿಕರ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಶಶಿಕುಮಾರ್ ರವರು ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲು ಕೆಲಸ ನಿರ್ವಹಿಸಿದ್ದರು. ಆದರೆ ಹುಬ್ಬಳಿ-ದಾರವಾಡ ಕಮೀಷನರ್ ಆಗಿ ನೇಮಕವಾದ ನಂತರ ಖಡಕ್ಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.