ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಚ್.ಐ.ಎಫ್ ಮತ್ತು ಹಿಕ್ಮಾ ಎಜುಕೇಶನ್ ಫೌಂಡೇಶನ್ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಕೌನ್ಸಿಲ್ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ್ಯ ಮತ್ತು ವೃತ್ತಿ ಮಾರ್ಗದರ್ಶನ ನೀಡಿದರು. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಪಿಯುಸಿ ಫಲಿತಾಂಶ ಬಂದಾಗ ಎಜುಕೇಶನ್ ಮೇಳದಲ್ಲಿ ಸುಮಾರು 800 ಕ್ಕಿಂತ ಹೆಚ್ಚು ಪಿಯುಸಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೌನ್ಸಿಲಿಂಗ್ ಮಾಡಿದ್ದ ಕೌನ್ಸಿಲ್ ಸದಸ್ಯರು, ಕಳೆದ ವಾರ SSLC ಫಲಿತಾಂಶ ಬಂದ ನಂತರ SSLC ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅವರಿಗೂ ನೆರವಾದರು.

ಕಮ್ಯೂನಿಟಿ ಸೆಂಟರ್ ನ ಮೂಲಕ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿ MBBS ಮಾಡುತ್ತಿರುವ ಕೌನ್ಸಿಲ್ ಸದಸ್ಯರು ಹತ್ತನೇ ತರಗತಿಯಿಂದಲೇ ನೀಟ್ ಗೆ ಹೇಗೆ ತಯಾರಿ ನಡೆಸಬೇಕು, ನೀಟ್ ಪರೀಕ್ಷೆಯ ಸಾಧನೆಗೆ ಯಾವ ರೀತಿ ಕಲಿಕೆ ಇರಬೇಕು, ಹೇಗೆ ಸಮಯ ಹೊಂದಿಸಬೇಕು ಮತ್ತು ಹೇಗೆ ಸಾಮರ್ಥ್ಯ ಬೆಳೆಸಬೇಕು ಎನ್ನುವ ಮಾಹಿತಿಯನ್ನು ನೀಡಿದರು. ತಾವು ನೀಟ್ ನಲ್ಲಿ MBBS ಸರಕಾರಿ ಸೀಟು ಪಡೆಯಲು ಹೇಗೆ ಕಲಿತಿದ್ದೇವೆ ಎನ್ನುವ ಕುರಿತು ಮಾರ್ಗದರ್ಶನ ನೀಡಿದರು. ಅದೇ ರೀತಿ JEE ಪರೀಕ್ಷೆ ಬರೆದು NITK ಯಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ಸಾಧಕ ವಿದ್ಯಾರ್ಥಿಗಳ ಪ್ರೇರಣೆ ಮತ್ತು ಸಲಹೆಗಳಿಂದ ಸ್ಫೂರ್ತಿ ಪಡೆದ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳಿಗೂ ಉತ್ತರ ಪಡೆದುಕೊಂಡರು.

CET ಮೂಲಕ ಸಾಧನೆ ಮಾಡಿ ಇಂಜಿನಿಯರಿಂಗ್ ನಲ್ಲಿ ವಿವಿಧ ಉನ್ನತ ಕಾಲೇಜಿನಲ್ಲಿ ಕಲಿಯುತ್ತಿರುವ ಕೌನ್ಸಿಲ್ ಸದಸ್ಯರು ವಿದ್ಯಾರ್ಥಿಗಳಿಗೆ ಪಿಯುಸಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳುವ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಕಾನೂನು, ವಾಣಿಜ್ಯ, ಮಾಧ್ಯಮ, ವೃತ್ತಿ ಆಧಾರಿತ ಶಿಕ್ಷಣ, ವೈದ್ಯಕೀಯ, ಸರಕಾರಿ ಉದ್ಯೋಗ, ಜಾಗತಿಕ ಬೇಡಿಕೆ ಇರುವ ಕೋರ್ಸ್ ಗಳು ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೌನ್ಸಿಲ್ ಸದಸ್ಯರ ಜೊತೆ ಸಮಾಲೋಚನೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸರಿಯಾದ ಶೈಕ್ಷಣಿಕ ಗುರಿಯನ್ನು ನಿಶ್ಚಯಿಸಿಕೊಂಡರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ, ದಾಖಲೆಗಳು ಮತ್ತು ಸರಕಾರಿ ಶೈಕ್ಷಣಿಕ ಸೌಲಭ್ಯ, ಮೀಸಲಾತಿಗಳ ಬಗ್ಗೆ ಮಾಹಿತಿ ನೀಡಲಾಯಿತು. ತಮ್ಮ ಅನುಭವದ ಮೂಲಕ ಪ್ರತಿಯೊಂದು ವಿಷಯದಲ್ಲಿ ತಿಳುವಳಿಕೆ ಇರುವ ಸೆಂಟರ್ ನ ಕೌನ್ಸಿಲ್ ಸದಸ್ಯರು ತಮ್ಮ ಸಹೋದರ ವಿದ್ಯಾರ್ಥಿಗಳಿಗೆ ಸ್ಪಷ್ಟ ಅರಿವು ಮೂಡಿಸಿದರು. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.
✍️. ಸುನ್ನೀ ಟುಡೇ
