ಹದಿನೇಳಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಮೆರಿಟ್ ಸರಕಾರಿ MBBS ಸೀಟ್. ಉಳಿದಂತೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ BDS/BAMS ಸರಕಾರಿ ಸೀಟು.
ಈ ಬಾರಿಯ ಕಠಿಣ ನೀಟ್ ಪರೀಕ್ಷೆಯಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ 91 ವಿದ್ಯಾರ್ಥಿಗಳ ಪೈಕಿ 17 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೆರಿಟ್ ನಲ್ಲಿ MBBS ಸರಕಾರಿ ಸೀಟು ಗಳಿಸಲು ಅರ್ಹತೆ ಪಡೆದಿದ್ದು, ಉಳಿದಂತೆ 2B, ಗ್ರಾಮೀಣ ಮತ್ತು ಕನ್ನಡ ಮೀಡಿಯಂನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು BDS/BAMS ಸರಕಾರಿ ಸೀಟು ಮೆರಿಟ್ ನಲ್ಲಿ ಪಡೆಯಲಿದ್ದಾರೆ. ಈ ಮೂಲಕ ಕಮ್ಯೂನಿಟಿ ಸೆಂಟರ್ ರಾಜ್ಯದಲ್ಲೇ ಗುರುತಿಸುವ ಸಾದನೆ ಮಾಡಿದೆ.
ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ ನೀಡುವುದು, ಪ್ರೋತ್ಸಾಹ ಕೊಡುವುದು ಮತ್ತು ಅವರನ್ನು ನಿರಂತರ ವೀಕ್ಷಣೆಯ ಮೂಲಕ ಉತ್ತೇಜಿಸಿ ಸೆಂಟರ್ ವಿದ್ಯಾರ್ಥಿಗಳ ಸಾಧನೆಗೆ ನೆರವಾಗುತ್ತದೆ. ಅರ್ಹ ವಿದ್ಯಾರ್ಥಿಗಳನ್ನು ವಿವಿಧ ನೀಟ್ ಕೋಚಿಂಗ್ ಸೆಂಟರ್ ಗಳಲ್ಲಿ ತರಬೇತಿಗಾಗಿ ಕಳುಹಿಸಿ ಕೊಟ್ಟು ಸಹಕರಿಸುತ್ತದೆ. ಕಳೆದ ನಾಲ್ಕು ವರ್ಷದ ಅವಧಿಯ ಈ ಸಾಮಾಜಿಕ ಸೇವೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು MBBS ಸರಕಾರಿ ಸೀಟು ಪಡೆದಂತಾಗುತ್ತದೆ.

ಈ ಮೊದಲ ಮೂರು ಅವಧಿಯಲ್ಲಿ 38 ವಿದ್ಯಾರ್ಥಿಗಳು MBBS, 16 ವಿದ್ಯಾರ್ಥಿಗಳು BDS, 10 ವಿದ್ಯಾರ್ಥಿಗಳು BAMS ಸರಕಾರಿ ಸೀಟು ಪಡೆದಿದ್ದು ಮಾತ್ರವಲ್ಲದೆ 132 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ವಿವಿಧ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಬಾರಿ ಹದಿನೇಳಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೀಟ್ ನಲ್ಲಿ MBBS ಸರಕಾರಿ ಸೀಟು ಪಡೆಯುವ ಮೂಲಕ ನಾಲ್ಕು ವರ್ಷದ ಅವಧಿಯಲ್ಲಿ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು MBBS ಉಚಿತ ಸೀಟು ಪಡೆದಂತಾಗುತ್ತದೆ.
ಕಮ್ಯೂನಿಟಿ ಸೆಂಟರ್ ನ ಈ ಸಾಧನೆಗೆ ಭಾರತ್ ಇನ್ಫೋಟೆಕ್ ನ ಮಾಲಕರಾದ S.M ಮುಸ್ತಫ, ಅಲ್ ಮುಝೈನ್ ನ ಮಾಲಕರಾದ ಝಕರಿಯಾ ಹಾಜಿ, ನಿವೃತ್ತ DCP ಜಿ.ಎ. ಬಾವಾ, ವೈಟ್ ಸ್ಟೋನ್ ನ ಮಾಲಕರಾದ B.M ಶರೀಫ್, ಗ್ರೂಪ್ ಡೆಲ್ಟಾ ಮಾಲಕರಾದ ಅಹ್ಮದ್ ಮೊಹಿದ್ದೀನ್, ಕಮ್ಯೂನಿಟಿ ಸೆಂಟರ್ ನ ಸ್ಥಾಪಕ ಸದಸ್ಯರಾದ ಅಬ್ದುಲ್ ಸತ್ತಾರ್ kp, ಇಮ್ತಿಯಾಜ್, ನಜೀರ್, ಮುನೀರ್ ವಿಟ್ಲ,
ಟೀಂ ಬೀ ಹ್ಯೂಮನ್ ನ ಸ್ಥಾಪಕರಾದ ಆಸಿಫ್ deals, ಖ್ಯಾತ C.A ನೌಫಲ್ , Dr ಹಕೀಮ್ ತೀರ್ಥಹಳ್ಳಿ ಕಮ್ಯೂನಿಟಿ ಸೆಂಟರ್ ನ ಕೌನ್ಸಿಲ್ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ ನೀಟ್ ಲಾಂಗ್ ಟರ್ಮ್ ಮಾಡಲು ಉದ್ದೆಶಿಸುವ ವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದಲ್ಲಿ ಉಚಿತ ನೀಟ್ ಕೋಚಿಂಗ್ ನೀಡುವುದಾಗಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.