ದೂದ್ ನಾನ ವತಿಯಿಂದ ಬೆಳ್ತಂಗಡಿ ಹಝ್ರತ್ ಅನ್ವರ್ ಮಸ್ತಾನ್ ದರ್ಗಾಕ್ಕೆ ಒಂದು ಆ್ಯಂಬುಲೆನ್ಸ್ ಕೊಡುಗೆ
ಮೂಡಬಿದಿರೆ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶೈಖುನಾ ಶಂಸುಲ್ ಉಲಮಾರವರ ಸ್ಮರಣಾರ್ಥ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಝ್ರತ್ ಸಯ್ಯಿದ್ ಸುಲೈಮಾನ್ ಬಾದುಶಾ ಖಾದ್ರಿ ಜಿಸ್ತಿಯಾ ಬಗ್ದಾದಿ ದೂದ್‌ನಾನಾ ದರ್ಗಾದ, ದೂದ್‌ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟಿಗೆ ಸಾರ್ವಜನಿಕರ ಸೇವೆಗಾಗಿ ಎರಡು ಆಂಬುಲೆನ್ಸ್‌ಗಳನ್ನು ಮೂಡುಬಿದಿರೆಯ ಮಾರುತಿ ಶೋರೂಂನಿಂದ ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿಯವರು ಬಿಡುಗಡೆಗೊಳಿಸಿದರು.
ಎರಡು ಆಂಬುಲೆನ್ಸ್‌ಗಳಲ್ಲಿ ಒಂದನ್ನು ದೂದ್‌ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳ್ತಂಗಡಿ ಹಝ್ರತ್ ಅನ್ವರ್ ಮಸ್ತಾನ್ ದರ್ಗಾಕ್ಕೆ ನೀಡಲಾಗುತ್ತಿದ್ದು ಇದನ್ನು ಜುಲೈ ಎರಡರಂದು ಲಕ್ಷ್ಮೇಶ್ವರ ದೂದ್‌ನಾನಾ ದರ್ಗಾದಲ್ಲಿ ನಡೆಯುವ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಮಾದಕ ಮುಕ್ತ ಸಮಾಜ ಅಭಿಯಾನ ಸಮಾರಭದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಟ್ರಸ್ಟಿನ ಚೇರ್ಮನ್ ಝೈನುಲ್ ಆಬಿದ್ ಲಕ್ಷ್ಮೇಶ್ವರ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಮುಹಮ್ಮದ್ ಶರೀಫ್ ದಾರಿಮಿ ಮೂಡುಬಿದಿರೆ, ಝಮೀರ್ ಮುಸ್ಲಿಯಾರ್ ಬಳಂಜ, ಸಾರಾ ಇಸ್ಮಾಯಿಲ್, ಹಮೀದ್ ಮಿಲನ್ ಹಾಗೂ ಲಿಟ್ಲ್ ಸ್ಟಾರ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
