ಪುತ್ತೂರು ಲವ್, ಸೆಕ್ಸ್, ದೋಖಾ ಕಹಾನಿ.!
ಪ್ರತಿಷ್ಠಿತ ಕುಟುಂಬದ ಪ್ರೇಮ ಕಹಾನಿ ಕೊನೆಗೂ ಬೀದಿಗೆ ಬಿದ್ದಿದೆ. ಮಾತೃ ದೇವೋ ಭವ ಅನ್ನುವ ಬಿಜೆಪಿ ಮುಖಂಡನ ಪುತ್ರನೇ ಯುವತಿಯೊಬ್ಬಳಿಗೆ ಗರ್ಭದಾರಣೆ ಮಾಡಿ ವಂಚಿಸಿ ಪರಾರಿಯಾಗಿದ್ದಾನೆ. ಹೈಸ್ಕೂಲಿನಲ್ಲಿ ಉಂಟಾಗಿದ್ದ ಪ್ರೇಮ ಕಹಾನಿ ಕಾಲೇಜಿನಲ್ಲಿ ಮಗುವಿಗೆ ಜನ್ಮ ನೀಡುವ ಹಂತಕ್ಕೆ ಬಂದು ತಲುಪಿದೆ. ಪುತ್ತೂರು ಲವ್, ಸೆಕ್ಸ್, ದೋಖಾ ಕಹಾನಿ ಇದೀಗ ದೊಡ್ಡ ಸುದ್ಧಿಯಾಗುತ್ತಿದೆ.
ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಸಹಪಾಠಿ ತರುಣಿಯನ್ನು ಪ್ರೀತಿಸಿ ಆಕೆಯನ್ನು ಗರ್ಭವತಿ ಮಾಡಿದ ಪ್ರಕರಣಕ್ಕೆ ಇದೀಗ ರೋಚಕ ತಿರುವು ಲಭಿಸಿದೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಪ್ರಕರಣದಲ್ಲಿ ಗರ್ಭಿಣಿ ವಿದ್ಯಾರ್ಥಿನಿ ಶುಕ್ರವಾರದಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

‘ಹೈಸ್ಕೂಲಿನಲ್ಲಿ ಕಲಿಯುತ್ತಿರುವ ಸಂದರ್ಭ ತನಗೆ ಹುಡುಗನ ಪರಿಚಯವಾಗಿದ್ದು, ಆಗಿನಿಂದಲೇ ಆತ ನನ್ನನ್ನು ಇಷ್ಟಪಟ್ಟಿದ್ದ. ಹರೆಯಕ್ಕೆ ಬಂದ ಬಳಿಕ ಇಬ್ಬರೂ ಪ್ರೀತಿಸಲು ಆರಂಭಿಸಿದೆವು. 2024 ರ ಆ.11 ರಂದು ಆತ ನನ್ನನ್ನು ಮನೆಗೆ ಕರೆಸಿಕೊಂಡಿದ್ದ. ಮದುವೆಯಾಗುವ ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡಿದ್ದ. 2025 ಜನವರಿ ತಿಂಗಳಲ್ಲೂ ಮತ್ತೆ ದೈಹಿಕ ಸಂಪರ್ಕ ನಡೆಸಿದ್ದ. ಇದರ ಪರಿಣಾಮ ನಾನು ಗರ್ಭವತಿಯಾಗಿದ್ದೇನೆ. ನಾನು ಗರ್ಭ ಧರಿಸಿದ ವಿಚಾರ ಪ್ರಿಯಕರನಿಗೆ ತಿಳಿಸಿದಾಗ ಆತ ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದು, ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಇದೀಗ ನನಗೆ ವಂಚನೆ ಮಾಡಿ ಪರಾರಿಯಯಾಗಿರುವುದಾಗಿ’ ಸಂತ್ರಸ್ತ ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಎಪ್ ಐ ಆರ್ ದಾಖಲಾಗಿದೆ.
ಸಂತ್ರಸ್ತೆ ಯುವತಿ ಪುತ್ತೂರು ನಗರಸಭೆಯ ವ್ಯಾಪ್ತಿಯ ನಿವಾಸಿಯಾಗಿದ್ದು, ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಳೆ. ಆರೋಪಿ ಕೂಡ ವಿದ್ಯಾರ್ಥಿಯಾಗಿದ್ದು, ಬಿಜೆಪಿಯ ಪ್ರಭಾವಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಪ್ರಕರಣ ದಾಖಲಾಗುತ್ತಿದ್ದಂತೆ ಭೂಗತನಾಗಿದ್ದಾನೆ.
ಈ ಮಧ್ಯೆ ಶುಕ್ರವಾರದಂದು ತುಂಬು ಗರ್ಭಿಣಿ ಯುವತಿ ಮಾಧ್ಯಮದ ಮುಂದೆ ಹೇಳಿಕೆ ನೀಡಲು ಸಮಯ ನಿಗಡಿಪಡಿಸಲಾಗಿದ್ದು, ಆದರೆ ದಿಢೀರ್ ಪತ್ರಿಕಾಗೋಷ್ಠಿ ರದ್ದಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.
