ಕಾರ್ಕಳ ADLR ಕಚೇರಿ: ಚವಾಣ್ ಕಮಾಯಿ; ತಾಲೂಕು ಆಡಳಿತ ಸೌಧದಲ್ಲಿ ಸರ್ವೇಯರ್‍ಗಳದ್ದೇ ದರ್ಬಾರ್

ಕರಾವಳಿ

ಕಾರ್ಕಳ ತಾಲೂಕು ಆಡಳಿತ ಸೌಧದಲ್ಲಿ ಸರ್ವೇಯರ್‍ಗಳದ್ದೇ ದರ್ಬಾರ್. ಇಲ್ಲಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರು (ADLR) ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದ್ದರೂ, ಹತ್ತು ಹದಿನೈದು ವರ್ಷಗಳಿಂದ ಇಲ್ಲಿಯೇ ಗೂಟ ಹಾಕಿ ಕೂತಿರುವ ಸರ್ವೇಯರ್, ಸೂಪರ್ ವೈಸರ್‍ಗಳ ಆಟಾಟೋಪದ ಮುಂದೆ ADLR ಮಂಕಾಗಿ ಕೂತಿರುತ್ತಾರೆ.

ಇತ್ತೀಚೆಗೆ ADLR ಆಗಿ ಬಂದ ಮಹಿಳಾ ಅಧಿಕಾರಿಗಳನ್ನು ಈ ಕಿಲಾಡಿ ಸರ್ವೇಯರ್‍ಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಅನ್ನುವ ಆರೋಪ ಕೇಳಿಬರುತ್ತಿದೆ.
ಕಾರ್ಕಳ ಭೂಮಾಪನ ಇಲಾಖೆಯ ಲಂಚವತಾರದ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಕಾದಂಬರಿಯಾದೀತು. ಕಳೆದ 15-20 ವರ್ಷಗಳಿಂದ ಇಲ್ಲಿ ಝಂಡಾ ಊರಿ ಕುಳಿತಿರುವ ಸರ್ವೇಯರ್‍ಗಳು ಮುಂಡಾ ಮೋಚಿದ್ದೆ. ಇನ್ನೊಂದು ಇಂಟರೆಸ್ಟಿಂಗ್ ಸ್ಟೋರಿ ಏನೆಂದರೆ ಒಂದು ಕುಟುಂಬದ ಆಸ್ತಿ ಭಾಗಕ್ಕಾಗಿ ವಿವಾದವಿದ್ದರೆ ಭೂಮಾಪನ ಇಲಾ ಖೆಯ ಸರ್ವೇಯರ್‍ಗಳಿಗೆ ಹಬ್ಬವಿದ್ದಂತೆ. ಇಬ್ಬರನ್ನು ದಾರಿ ತಪ್ಪಿಸಿ ಹಣ ದೋಚಲು ಮುಂದಾಗುತ್ತಾರೆ. ಇಲ್ಲಿನ ಸೂಪರ್ ವೈಸರ್‍ಗಳಂತೂ ಪರಮ ಭ್ರಷ್ಟರು, ನುಂಗುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಲಂಚ ಕಂಡರೆ ಕಣ್ಣು, ಬಾಯಿ ಬಿಡುತ್ತಾರೆ. ಸರ್ವೇಯರ್‍ಗಳಂತೂ ಜೇಬು ಭರ್ತಿ ಮಾಡಿಕೊಳ್ಳುವುದೇ ಡ್ಯೂಟಿ ಎಂದು ನಂಬಿದ್ದಾರೆ.

ಕಾರ್ಕಳದಲ್ಲಿ ಅವನೊಬ್ಬನಿದ್ದಾನೆ ರಾಮಚಂದ್ರ ಚವಾಣ್. ಕಾರ್ಕಳ ತಾಲೂಕು ಸರ್ವೇ ಕಚೇರಿಯಲ್ಲಿ ಸರ್ವೇ ಸೂಪರ್‍ವೈಸರ್ ಈತ. ಇವ ನೊಬ್ಬ ಸಾಧಾರಣ ಸರ್ವೇಯರಾ ದರೂ, ಇವನಿಗಿಲ್ಲಿ ಹಿರಿಯವರ ಕೃಪಾಕಟಾಕ್ಷ ಇದೆ. ಸರ್ವೇ ಇಲಾಖೆಯ ಸೂಪರ್ ವೈಸರ್. ಹಾಗಾಗಿ ಇಲ್ಲಿ ಇವನಿಟ್ಟಿದ್ದು, ಇವನೇ ತೆಗೆದದ್ದು. ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ಅಳಿದುಳಿದ ಊರಿಗೆ ಉಳಿದೋನೇ ಅರಸ ಅನ್ನುವಂತೆ ಕಾರ್ಕಳ ಸರ್ವೇ ಇಲಾಖೆಯಲ್ಲಿ ರಾಜದರ್ಬಾರ್ ನಡೆಸುತ್ತಿದ್ದಾನೆ. ಲಂಚ ಕೊಡದೆ ಈತ ಕೆಲಸನೇ ಮಾಡಲ್ವಂತೆ. ಕಳೆದ 25 ವರ್ಷಗಳಿಂದ ಇಲ್ಲಿಯೇ ಝಂಡಾ ಊರಿ ಕುಳಿತಿ ರುವ ಇವನೇ ಇಲ್ಲಿ ಸುಪ್ರೀಂ ಎಡಿ ಎಲ್‍ಆರ್ ಹೆಸರಿಗೆ ಮಾತ್ರ. ಇಲ್ಲಿ ಇವ ಹೇಳಿದ್ದೇ ವೇದ ವಾಕ್ಯ. ಮಾಡಿದ್ದೇ ದರ್ಬಾರ್ ಅನ್ನು ವಂತಾಗಿದೆ.

ಭೂಮಾಪನ ಇಲಾಖೆಯನ್ನು ಅಡ್ಡೆ ಮಾಡಿಕೊಂಡು ಡೀಲ್ ಕುದುರಿಸುವುದರಲ್ಲಿ ಚವಾಣ್ ನಿಸ್ಸೀಮ. 25 ವರ್ಷಗಳಿಂದ ಒಂದೇ ಕಡೆಯಲ್ಲಿ ಗೂಟ ಹಾಕಿ ಕೂತಿರುವ ಕಾರಣ ನಾನೇ ಸುಪ್ರೀಂ ಅನ್ನುವ ದುರಂಹಕಾರ ತಲೆಗೆ ಅಡರಿ ಹೋಗಿದೆ. ಫೈಲ್‍ಗಳನ್ನು ಪೆಂಡಿಂಗ್ ಇಟ್ಟು ಜನರನ್ನು ಸತಾಯಿಸುತ್ತಾನೆ ಅನ್ನುವ ಆರೋಪವಿದೆ.
ಕಾರ್ಕಳ ಸರ್ವೇ ಇಲಾಖೆ ಭ್ರಷ್ಟಾ ಚಾರದ ಕೊಂಪೆಯಾಗಿ ಬದಲಾಗಿದೆ. ಇಲ್ಲಿಯ ಸರ್ವೇ ಕಚೇರಿಗೆ ಅರ್ಜಿ ದಾರರುಗಳು ಅದ್ಯಾವ ಕೆಲಸಕ್ಕಾದರೂ ಅರ್ಜಿ ಸಲ್ಲಿಸಲಿ, ಹಣದ ಕವರೊಂದನ್ನು ಇಲ್ಲಿ ಸಲ್ಲಿಸಬೇಕು. ಆ ಪರಿ ಕೆಟ್ಟು ಹೋಗಿದೆ, ಇಲ್ಲಿಯ ಸರ್ವೇ ಇಲಾಖೆ. ಇಲ್ಲಿರುವ ಬಹುತೇಕ ಸರ್ವೇಯರ್‍ಗಳು ಹತ್ತಿಪ್ಪತ್ತು ವರ್ಷಗಳಿಂದ ಇಲ್ಲಿಯೇ ಬಿಡಾರ ಹಾಕಿ ಕೂತಿದ್ದಾರೆ. ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ ಅನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ. ಇಲ್ಲಿ ಹಣ ಕೊಟ್ಟರೆ ಎಲ್ಲವೂ ಸಲೀಸು. ಪೋಡಿ ಫೈಲ್ ತಿದ್ದುವುದು, ಆಕಾರ್ ಬಂದ್ ತಿದ್ದುವುದು, ಕೆಲವೊಮ್ಮೆ ಎಫ್‍ಎಂಬಿನೂ ತಿರುಗಿಸುತ್ತಾರೆ. ಇಲ್ಲಿ ಚವಾಣ್ ಕೃಪೆಯಿಂದ ನಕಲಿ ಫೈಲ್ ಗಳು ಪಾಸ್ ಆಗಿ ಬಿಡುತ್ತದೆ. ರಿಜೆಕ್ಟ್ ಫೈಲ್‍ಗಳು ಸಕ್ರಮಗೊಳ್ಳುತ್ತಿದೆ.
ಇಲ್ಲಿ ರಾಮಚಂದ್ರ ಚವಾಣ್ ಸೂಪರ್ ವೈಸರ್ ಕಥೆ ಈ ರೀತಿಯಾ ದರೆ, ಮತ್ತೊಬ್ಬ ಸೂಪರ್‍ವೈಸರ್ ಇದ್ದಾನೆ ಅನಿಲ್ ಅಂತ. ಆತನದ್ದು ಕೂಡ ಈತನಿಗಿಂತ ಕಡಿಮೆ ಏನಿಲ್ಲ ಬಿಡಿ. ಕಾರ್ಕಳ ಸರ್ವೇ ಇಲಾಖೆ ಯಲ್ಲಿ ಯಾರಿಗೂ ಹೆದರದೆ ಅಕ್ರಮ ಗಳೆಲ್ಲ ಸಕ್ರಮಗೊಳ್ಳುತ್ತಿದೆ. ಲೋಕಾ ಯುಕ್ತ ಅಧಿಕಾರಿಗಳು, ಜಿಲ್ಲಾಡಳಿತ ಕಾರ್ಕಳ ಸರ್ವೇ ಇಲಾಖೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ.

ಜಿಲ್ಲಾಧಿಕಾರಿ, ಶಾಸಕರೇ ಇತ್ತ ನೋಡಿ

ಉಡುಪಿಗೆ ಹೊಸ ಜಿಲ್ಲಾಧಿಕಾರಿಗಳು ಬಂದಿದ್ದಾರೆ. ಕಾರ್ಕಳ ಸರ್ವೇ ಇಲಾಖೆಗೆ ಮೊದಲು ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ. ಇನ್ನು ಕಾರ್ಕಳದ ಶಾಸಕರಾದ ಸುನಿಲ್‍ಕುಮಾರ್ ಬಿಜೆಪಿ ಪಕ್ಷದಲ್ಲಿ ದೊಡ್ಡ ಪ್ರಭಾವಿಗಳು. ಬಿಜೆಪಿ ರಾಜ್ಯಾಧ್ಯಕ್ಷರಾಗುವ ಮಟ್ಟಿಗೆ ತಮ್ಮ ವರ್ಚಸ್ಸು ವೃದ್ದಿಸಿಕೊಂಡಿದ್ದಾರೆ. ಆದರೆ ತಮ್ಮ ಕ್ಷೇತ್ರದಲ್ಲಿ ಸರ್ವೇ ಇಲಾಖೆಯಲ್ಲಿ ಭಾರೀ ಗೋಲ್‍ಮಾಲ್ ಪ್ರಕರಣಗಳು ನಡೆಯುತ್ತಿದ್ದರೂ ಸೈಲೆಂಟಾಗಿ ಕೂತಿರುವುದು ಆಶ್ಚರ್ಯ ತಂದಿದೆ. ಭೂದಾಖಲೆಯ ADLR ಮೇಡಂ ಒಂದು ರೂಪಾಯಿ ಹಣ ತೆಗೆಯುವುದಿಲ್ಲ ಅನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆದರೆ ಮೇಡಂ ಹೆಸರಿನಲ್ಲಿ ಸೂಪರ್‍ವೈಸರ್ ರಾಮಚಂದ್ರ ಚವಾಣ್ ಕಾರ್ಕಳ ಭೂಮಾಪನ ಇಲಾಖೆಯಲ್ಲಿ ಲಂಚದ ಸಾಮ್ರಾಜ್ಯವನ್ನು ಸೃಷ್ಟಿಸಿದ್ದು, ಸಾರ್ವಜನಿಕರೊಂದಿಗೆ ದುರಂಹ ಕಾರದಿಂದ ವರ್ತಿಸುವುದಾಗಿ ಆರೋಪಗಳಿವೆ. ಒಂದೇ ಕಚೇರಿಯಲ್ಲಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಾರ್ಕಳದಿಂದ ವರ್ಗಾವಣೆಯಾಗದೆ ಇಲ್ಲಿಯೇ ಝಂಡಾ ಊರಿ ಕುಳಿತಿರುವ ಹಿಂದೆ ಯಾರ ಮಹಿಮೆ ಇದೆ. ಇನ್ನಾದರೂ ಶಾಸಕರು ಕಾರ್ಕಳ ಸರ್ವೇ ಇಲಾಖೆಗೆ ಮೇಜರ್ ಸರ್ಜರಿ ಮಾಡುವರೇ?