2013 ರಲ್ಲಿ ಬಿಜೆಪಿ ಪಕ್ಷದ ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶವಾಗಿದ್ದು
ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆಗಳಿಗೆ ಅವಕಾಶ ನಿಷೇಧಿಸಬೇಕು ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆಯವರ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ. ಜಗತ್ತಿನಾದ್ಯಂತ ಎಲ್ಲಿಯೂ ಅಧಿಕೃತವಾಗಿ ನೋಂದಣಿಯಾಗದ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿಷೇಧಗೊಳಗಾಗಬೇಕಾದ ಅಗತ್ಯವಿದೆ.

ಈಗಾಗಲೇ ಸರ್ಕಾರಿ ಸೇರಿದಂತೆ ಅನುದಾನಿತ ಶಾಲಾ ಕಾಲೇಜುಗಳ ಆವರಣಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ನಿರಾಕರಿಸಿ ಬಿಜೆಪಿ ಪಕ್ಷದ ಜಗದೀಶ್ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದಿನಾಂಕ 07-02-2013 ರಲ್ಲಿ ಆದೇಶವಾಗಿದ್ದು, ಅದನ್ನೇ ಪ್ರಿಯಾಂಕಾ ಖರ್ಗೆರವರು ಆ ಆದೇಶವನ್ನು ಜಾರಿಗೆ ತರಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆಯೇ ಹೊರತು RSS ನಿಷೇಧಿಸಬೇಕು ಎಂದಿಲ್ಲ. ಆದರೆ” RSS ನಿಷೇಧ” ಎಂದು ತಿರುಚಿ ರಾಜಕೀಯ ಲಾಭ ಪಡೆಯಲು ಬಿಜೆಪಿ, ಸಂಘಪರಿವಾರದವರು ಪ್ರಯತ್ನಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಶಾಲಾ, ಕಾಲೇಜುಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧ ಮಾಡುವುದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಂತಾಗುತ್ತದೆ.
ರಾಜ್ಯ ಸರ್ಕಾರ ತಕ್ಷಣ ಸರ್ಕಾರಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳು ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ಭಾರತದಲ್ಲಿ ಸಂವಿಧಾನಬದ್ಧವಾಗಿ ನೋಂದಣಿಯಾಗದ RSS ಚಟುವಟಿಕೆಗಳನ್ನು ನಿಷೇಧಿಸಬೇಕು ಮತ್ತು ಸಶಸ್ತ್ರ ಕಾಯ್ದೆಯಡಿ ಬರುವ ದೊಣ್ಣೆಗಳನ್ನು ಹಿಡಿದು ಸಾರ್ವಜನಿಕ ರಸ್ತೆಗಳಲ್ಲಿ ನಡೆಸುವ ಮೆರವಣಿಗೆಗಳಿಗೆ ಅವಕಾಶ ನಿಷೇಧಿಸಬೇಕು ಎಂದು ಒತ್ತಾಯಿಸುತ್ತೇನೆ. ಮತ್ತು ಸಚಿವ ಪ್ರಿಯಾಂಕಾ ಖರ್ಗೆ ಹಾಗೂ ಅವರ ಕುಟುಂಬದ ಮೇಲೆ ಮಾನಸಿಕ ಧಾಳಿಯ ಜೊತೆಗೆ ದೈಹಿಕ ದಾಳಿ ನಡೆಸುವ ಬೆದರಿಕೆ ಒಡ್ಡುತ್ತಿರುವ ಸಂಘಪರಿವಾರದ ಪುಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸುತ್ತೇನೆ.
