ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುತ್ತದೆಯೇ ಹೊರತು ಇಬ್ಬರು ಸಮರ್ಥ ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಅಳೆಯುವ ಸಾಧನವಾಗಿ ಅಲ್ಲ” ಎಂದು ಪೀಠ ಅಭಿಪ್ರಾಯ
ವಿಚ್ಛೇದನ ಪಡೆದ ಸಂಗಾತಿ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಜೀವನಾಂಶವನ್ನು ನೀಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ.
ಭಾರತೀಯ ರೈಲ್ವೆ ಸಂಚಾರ ಸೇವೆಯ ಗ್ರೂಪ್ ‘ಎ’ ಅಧಿಕಾರಿಯಾಗಿರುವ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. “ಶಾಶ್ವತ ಜೀವನಾಂಶವನ್ನು ಸಾಮಾಜಿಕ ನ್ಯಾಯಕ್ಕಾಗಿ ನೀಡಲಾಗುತ್ತದೆಯೇ ಹೊರತು ಇಬ್ಬರು ಸಮರ್ಥ ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಅಳೆಯುವ ಸಾಧನವಾಗಿ ಅಲ್ಲ” ಎಂದು ಪೀಠ ಹೇಳಿದೆ.
2010 ರಲ್ಲಿ ವಿವಾಹವಾದ ದಂಪತಿ ಕೇವಲ ಒಂದು ವರ್ಷ ಮಾತ್ರ ಒಟ್ಟಿಗೆ ವಾಸಿಸಿದ್ದರು. ಅಗಸ್ಟ್ 2023 ರಲ್ಲಿ ಕುಟುಂಬ ನ್ಯಾಯಾಲಯವು ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಪತ್ನಿಯಿಂದ ಮಾನಸಿಕ ಮತ್ತು ದೈಹಿಕ ಕ್ರೌರ್ಯ, ನಿಂದನೀಯ ಭಾಷೆ, ಅವಮಾನಕರ ಸಂದೇಶಗಳು, ವೈವಾಹಿಕ ಹಕ್ಕುಗಳ ನಿರಾಕರಣೆ ಮತ್ತು ವೃತ್ತಿಪರ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಮಾನ ಮಾಡಲಾಗುತ್ತದೆ ಎಂದು ಪತಿ ಆರೋಪಿಸಿದ್ದರು. ಆದರೆ ಪತ್ನಿ ಈ ಆರೋಪಗಳನ್ನು ನಿರಾಕರಿಸಿ, ಪ್ರತಿ ಆರೋಪ ಮಾಡಿದರು. ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಲು ಪತ್ನಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಪತಿ ಬೇಡಿಕೆ ಇಟ್ಟಿದ್ದರು.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ ನ್ಯಾಯಾಲಯಗಳು ಶಾಶ್ವತ ಜೀವನಾಂಶ ಮತ್ತು ಜೀವನಾಂಶವನ್ನು ನೀಡುವ ವಿವೇಚನೆಯನ್ನು ಹೊಂದಿವೆ. ದೂರುದಾರರ ಆದಾಯ, ಗಳಿಕೆಯ ಸಾಮರ್ಥ್ಯ, ಆಸ್ತಿ ಮತ್ತು ನಡವಳಿಕೆ ಮತ್ತು ಇತರ ಸಂಬಂಧಿತ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಪೀಠ ಹೇಳಿತು.
